ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ನಮ್ಮ ದೇಶವನ್ನು ಸುಭದ್ರವಾಗಿಡಲು ಮತ್ತು ಸದೃಢ ದೇಶದ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯ ಕೈ ಭದ್ರಪಡಿಸಲು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಬೇಕು ಎಂದು ಬೇಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ತೊಚ ಅನಂತಸುಬ್ಬರಾಯ ಮತ್ತು ಹಾಸನ ಹೆಚ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹಾಗೂ ಮಾಜಿ ಜಿಪಂ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಅಯ್ಕೆಯಾದ ಪ್ರಜ್ವಲ್ ರೇವಣ್ಣನವರು ತಮ್ಮ ಕಿರಿಯ ವಯಸ್ಸಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಅಗಮ್ಯ ಕೊಡುಗೆ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿರಂತರ ಮಾರ್ಗದರ್ಶನ ಮತ್ತು ಅನುಭವವನ್ನು ಪಡೆದ ಪ್ರಜ್ವಲ್ ಹಾಸನ ಜಿಲ್ಲೆಯ ಅಭಿವೃದ್ಧಿ ಹರಿಕಾರ ರೇವಣ್ಣ ಅವರೊಂದಿಗೆ ಸೇರಿ ಲೋಕಸಭಾ ಕ್ಷೇತ್ರದ ಹತ್ತಾರು ಅಭಿವೃದ್ಧಿ ಕಾರ್ಯಕ್ಕೆ ಶ್ರೀಕಾರ ಹಾಕಿದ್ದಾರೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹಾಸನ ಬೇಲೂರು ರಸ್ತೆ ತೀವ್ರ ವಾಹನ ದಟ್ಟಣೆ ಹೆಚ್ಚಾಗಿದೆ. ಕಾರಣ ಚಿಕ್ಕಮಗಳೂರು ಮತ್ತು ಬೇಲೂರಿಗೆ ಪ್ರವಾಸಿಗರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಮತ್ತು ಸಂಸದ ಪ್ರಜ್ವಲ್ ರೇವಣ್ಣನವರು ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನೀತಿನ್ ಗಡ್ಕರಿರವರ ಬಳಿ ನಿಯೋಗ ತೆರಳಿ ಇಲ್ಲಿನ ರಸ್ತೆಯ ಬಗ್ಗೆ ಮನವರಿಕೆ ಮಾಡಿದ ಕಾರಣದಿಂದ ಹಾಸನ ಬೇಲೂರು ಚತುಪ್ಷಥ ರಸ್ತೆಗೆ ಕಳೆದ ದಿನ ಮೈಸೂರಿನಲ್ಲಿ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರು. ಬಿಜೆಪಿ ಜಿಡಿಎಸ್ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಮೈತ್ರಿ ನಡೆದಿದೆ. ಹಾಸನ ಲೋಕಸಭಾ ಕ್ಷೇತ್ರ ಖಚಿತವಾಗಿ ಜೆಡಿಎಸ್ ಅಭ್ಯರ್ಥಿ ಅದು ಪ್ರಜ್ವಲ್ ರೇವಣ್ಣನವರೇ ಅಂತಿಮವಾಗಿದೆ. ಈ ಸಂಬಂಧ ಪ್ರಜ್ವಲ್ ರೇವಣ್ಣನವರು ಕ್ಷೇತ್ರದ ಎಲ್ಲಾ ಬಿಜೆಪಿ ಮುಖಂಡರ ಸೌಹಾರ್ದತೆಯಿಂದ ಮಾತನಾಡಿದ್ದು, ನಿನ್ನೆ ಹಾಸನ ಕ್ಷೇತ್ರದ ಪ್ರೀತಂಗೌಡರ ಸಹಕಾರ ಕೇಳುವ ಬಗ್ಗೆ ಮಾದ್ಯಮ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರದ ಜೊತೆಗೆ ಸಂಘಟನೆ ನಡೆಸಿದ್ದಾರೆ. ನಮ್ಮ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ 5 ಸಾವಿರಕ್ಕೂ ಮತ ಲೀಡ್ ನೀಡಲಾಗಿತ್ತು. ಈ ಭಾರಿ ಖಂಡಿತ ೧೦ ಸಾವಿರ ಮತ ಲೀಡ ನೀಡಲಾಗಿದೆ ಎಂದ ಅವರು ಕಾಂಗ್ರೆಸ್ ಅಭ್ಯರ್ಥಿ ಶ್ರೆಯಸ್ಸು ಪಟೇಲ್ ನಮಗೆ ಎದುರಾಳಿಯಾಗಿದ್ದಾರೆ. ಅವರನ್ನು ನಾವುಗಳು ಲಘುವಾಗಿ ಪರಿಗಣಿಸುವ ಮಾತು ಇಲ್ಲ. ಹಾಗಂತ ಕಾಂಗ್ರೆಸ್ ಗ್ಯಾರೆಂಟಿ ಲೋಕಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ. ಜನತೆ ಗ್ಯಾರೆಂಟಿಗೆ ಈಗಾಗಲೇ ಮತ ಹಾಕಿದ್ದಾರೆ. ಈ ಭಾರಿ ದೇಶ ಸಮಗ್ರತೆಯಿಂದ ಮೋದಿಯವರನ್ನು ಬೆಂಬಲಿಸುತ್ತಾರೆ ಎಂದರು. ಸಂಸದ ಪ್ರಜ್ವಲ್ ರೇವಣ್ಣನವರು ಕ್ಷೇತ್ರಕ್ಕೆ ನೀಡಿದ ಅಭಿವೃದ್ಧಿ ಕೆಲಸದ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅದ್ಧೂರಿ ಚೇತನ್ ಕುಮಾರ್, ಜಿ.ಟಿ.ಇಂದಿರಾ ಧರ್ಮಪ್ಪ ಹಾಗೂ ಅಬ್ದುಲ್ ಖಾದರ್ ಹಾಜರಿದ್ದರು.