ಸಹಕಾರ ಭಾರತಿ ಅಭ್ಯರ್ಥಿಗಳನ್ನು ಬೆಂಬಲಿಸಿ

| Published : Feb 03 2025, 12:30 AM IST

ಸಾರಾಂಶ

ಶಿವಮೊಗ್ಗ: ಮಾಮ್‌ಕೋಸ್‌ ಅಡಕೆ ಬೆಳೆಗಾರರ ರಕ್ಷಣೆ ಮಾಡುತ್ತಾ ಬಂದಿದೆ. ಫೆ.4 ರಂದು ಮಾಮ್‌ಕೋಸ್‌ ಚುನಾವಣೆ ನಡೆಯುತ್ತಿದ್ದು, ಸಹಕಾರ ಭಾರತಿ ನೇತೃತ್ವದಲ್ಲಿ ದಕ್ಷ, ಸಮರ್ಥ, ನಾಯಕತ್ವದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗ: ಮಾಮ್‌ಕೋಸ್‌ ಅಡಕೆ ಬೆಳೆಗಾರರ ರಕ್ಷಣೆ ಮಾಡುತ್ತಾ ಬಂದಿದೆ. ಫೆ.4 ರಂದು ಮಾಮ್‌ಕೋಸ್‌ ಚುನಾವಣೆ ನಡೆಯುತ್ತಿದ್ದು, ಸಹಕಾರ ಭಾರತಿ ನೇತೃತ್ವದಲ್ಲಿ ದಕ್ಷ, ಸಮರ್ಥ, ನಾಯಕತ್ವದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಮ್‌ಕೋಸ್‌ ನಿವ್ವಳ ಲಾಭ ಗಳಿಸಿ ದಾಪುಗಾಲಿಡುತ್ತಿದೆ. 2005-06ರಲ್ಲಿ 154.17 ಲಕ್ಷ ನಿವ್ವಳ ಲಾಭ ಹೊಂದಿತ್ತು. 2023-24ರಲ್ಲಿ 525.35 ಲಕ್ಷ ನಿವ್ವಳ ಲಾಭ ಗಳಿಸಿದೆ. ಕೋವಿಡ್ ಸಂದರ್ಭದಲ್ಲೂ ಮಾಮ್‌ಕೋಸ್‌ ರೈತರ ರಕ್ಷಣೆ ಮಾಡಿದೆ ಎಂದರು.

ಅಡಕೆ ಆರೋಗ್ಯಕ್ಕೆ ಹಾನಿಕರ ಮತ್ತು ಕ್ಯಾನ್ಸರ್ ಕಾರಕ ಎಂಬ ವರದಿ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ, ಕ್ಯಾನ್ಸರ್ ಕಾರಕವಲ್ಲ ಎಂಬ ನ್ಯಾಯಾಲಯದ ತೀರ್ಪು ನೀಡಿದೆ. ಇದು ಮಾಮ್‌ಕೋಸ್‌ ನ ನಿರಂತರ ಪ್ರಯತ್ನಕ್ಕೆ ಸಂದ ಜಯವಾಗಿದೆ. ಅಡಕೆ ಬೆಳೆಗಾರರ ಪರವಾಗಿ ಮಾಮ್‌ಕೋಸ್‌ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಯಾರೋ ಬಂದು ಇಲ್ಲಿ ರಾಜಕೀಯವಾಗಿ ಅಧಿಕಾರ ಮಾಡಿದರೆ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಲಿದ್ದಾರೆ. ಅಡಕೆ ಬೆಳೆಗಾರರನ್ನು ಉಳಿಸಿ, ಬೆಳೆಸುವ ತಂಡ ಮಾಮ್‌ಕೋಸ್‌ನಲ್ಲಿ ಆಡಳಿತ ನಡೆಸಬೇಕಿದೆ. ಸಹಕಾರಿ ಭಾರತಿ ತಂಡ ಅಡಕೆ ಬೆಳೆಗಾರರ ಪರವಾಗಿ ಆಡಳಿತ ನಡೆಸಲು ಸಮರ್ಥವಾಗಿದೆ. ಆಡಿಟ್ ವರ್ಗಿಕರಣದಲ್ಲಿ ಬಿ ದರ್ಜೆದಲ್ಲಿದ್ದ ಮಾಮ್‌ಕೋಸ್‌ ಎ ದರ್ಜೆಗೆ ಬಂದಿದೆ. ತುಂಬಾ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ ಮಾಮ್‌ಕೋಸ್‌ ಸಾಲ ನೀಡುತ್ತಿದೆ. ಅಡಕೆ ಬೆಳೆಗಾರ ರೈತರಿಗೆ 250 ಕೋಟಿ ರು. ಸಾಲ ನೀಡಿದೆ ಎಂದು ತಿಳಿಸಿದರು.

ಮ್ಯಾಮ್ಕೋಸ್‌ಗೆ ಚುನಾವಣೆ ನಡೆಯುತ್ತಿದೆ ಸಹಕಾರಿ ಭಾರತಿ ತಂಡ ಸ್ಪರ್ಧೆ ಮಾಡಿದೆ. ಸಹಕಾರ ಭಾರತಿ ತಂಡವನ್ನು ಅಡಕೆ ಬೆಳೆಗಾರರು ಬೆಂಬಲಿಸಬೇಕು. ಸಹಕಾರ ಭಾರತಿ ತಂಡವನ್ನು ಬೆಂಬಲಿಸಿ ಮತ ನೀಡಿ ಗೆಲ್ಲಿಸಬೇಕು. 19 ನಿರ್ದೇಶಕರ ಸ್ಥಾನಕ್ಕೆ ನಮ್ಮ ಸಹಕಾರ ಭಾರತಿ ತಂಡ ಸ್ಪರ್ಧೆ ಮಾಡಿದೆ. ಮಂಡಳಿಗಳಿಂದ ಯಾವುದೇ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಅನೇಕ ಮಂಡಳಿಗಳು ಇಂದು ನಿಷ್ಕ್ರೀಯವಾಗಿದೆ. 16 ಸಂಸ್ಥೆಗಳಿಗೆ ಅಡಕೆ ಹಾನಿಕಾರಕ ಅಲ್ಲ ಎನ್ನುವುದನ್ನ ಸಂಶೋಧನೆ ಮಾಡಲು ಕೇಂದ್ರ ಸರ್ಕಾರ ನೀಡಿದೆ. ಅನೇಕ ಲಾಭಿಗಳು ಅಡಕೆ ಬೆಳೆಯನ್ನು ಮುಗಿಸಲು ಮುಂದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌ ಮತ್ತಿತರರು ಇದ್ದರು. ಕಾಂಗ್ರೆಸ್ ಅಡಕೆ ಬೆಳೆಗಾರರ ಕ್ಷೇಮೆ ಕೇಳಲಿ: ಆರಗ

ಅಡಕೆಯಲ್ಲಿ ಕ್ಯಾನ್ಸರ್ ಗುಣ ಇದೆ ಅಂತ ಹೇಳಿದ್ದೆ ಕಾಂಗ್ರೆಸ್. ಹಾಗಾಗಿ ಕಾಂಗ್ರೆಸ್ ಬೆಳೆಗಾರರ ಕ್ಷೇಮೆ ಕೇಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಕಾಂಗ್ರೆಸ್ ಆಡಳಿತ ದೇಶದಲ್ಲಿದ್ದಾಗ ಅಡಕೆ ಕ್ಯಾನ್ಸರ್ ಕಾರಕ ಎಂದು ಹೇಳಿದೆ. ಅಡಕೆಗೆ ರಕ್ಷಣೆ ಕೋಡುವ ನಿಟ್ಟಿನಲ್ಲಿ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಅಡಕೆ ಕಳ್ಳಸಾಗಾಣಿಕೆ ತಡೆಯಲು ಮಹಾಮಂಡಲ ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತಿದೆ. ಅಡಕೆ ಹಾನಿಕಾರಕ ಅಲ್ಲ ಎನ್ನುವ ಕುರಿತು ಸಂಶೋಧನೆ ನಡೆಯುತ್ತಿದೆ. ಮಲೆನಾಡಿನ ಬೆಳೆಯಾಗಿದ್ದ ಅಡಕೆ ಇಂದು ರಾಜ್ಯದ ಅನೇಕ ಜಿಲ್ಲೆಯಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅಡಕೆ ಬೆಳೆಗೆ ಬಂದ ಬೆಲೆಯೇ ಶಾಪವಾಗಿ ಪರಿಣಿಮಿಸಿದೆ ಎಂದರು.