ಸಾರಾಂಶ
ವಿಜಯಪುರ: ನಾನು ಯಾವುದೇ ಪಕ್ಷದಿಂದ ಅಭ್ಯರ್ಥಿಯಾಗಿ ನಿಂತರೂ ನನ್ನನ್ನು ನಾನು ಯಾವುದೇ ಪಕ್ಷಕ್ಕೆ ಮಾರಾಟ ಮಾಡಿಕೊಂಡವನಲ್ಲ. 20 ವರ್ಷಗಳಿಂದ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳಿಗೆ ಮುಂಚೂಣಿಯಲ್ಲಿ ನಿಂತು ನ್ಯಾಯ ದೊರಕಿಸಿಕೊಟ್ಟಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ತಿಳಿಸಿದರು.

ಶಿಕ್ಷಕರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಯಾರಿಂದಲೂ ಹಣ ಪಡೆದುಕೊಂಡಿಲ್ಲ. ಪವಿತ್ರವಾದ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಐದು ಬಾರಿ ಗೆದ್ದಿರುವೆ. ನಾನು ಶಿಕ್ಷಣ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ದುಡಿದಿದ್ದರೆ ತಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಪ್ರಾರ್ಥಿಸಿದರು.ಕೊರೋನಾ ಸಂಕಷ್ಟದಲ್ಲಿಯೂ ಸರ್ಕಾರದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ೧೦೩ ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ೬೫೦೦ಕ್ಕೂ ಹೆಚ್ಚು ಫುಡ್ ಕಿಟ್‌ಗಳನ್ನು ವಿತರಿಸಿ, ಯಾವುದೇ ಕಾರಣಕ್ಕೂ ಫುಡ್ ಕಿಟ್ ನೀಡುವ ಫೋಟೋ ತೆಗೆಯಬಾರದೆಂದು ನಿರ್ದೇಶನ ನೀಡಿದ್ದಾಗಿ ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ನೀಡುತ್ತಿರುವ ಹಿಂಸೆಗಳಿಂದ ಹತ್ತು-ಹಲವು ರೀತಿಯಲ್ಲಿ ಹೊರಬರಲು ಪುಟ್ಟಣ್ಣರಂತಹ ಶಿಕ್ಷಣ-ಶಿಕ್ಷಕ ಪ್ರೇಮಿಯಿಂದ ಮಾತ್ರ ಸಾಧ್ಯವಾಗಿದೆ. ಎಲ್ಲಾ ಶಿಕ್ಷಕರು ಒಗ್ಗಟ್ಟಾಗಿ ಪುಟ್ಟಣ್ಣರವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ತಿಳಿಸಿದರು.ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಪುಟ್ಟಣ್ಣ ನೇರ, ನಿಷ್ಠುರವಾದಿ. ಬದ್ಧತೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೋರಾಡಬಲ್ಲ ವ್ಯಕ್ತಿ. ಶಿಕ್ಷಕರು ಪುಟ್ಟಣ್ಣನವರಿಗೆ ಮತ ನೀಡಬೇಕೆಂದು ತಿಳಿಸಿದರು.
ಸಮಾವೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.