ಸುರಪುರ ನಾಟಕದ ತವರು: ಹನುಮಪ್ಪ ನಾಯಕ

| Published : Feb 14 2024, 02:15 AM IST

ಸಾರಾಂಶ

ಸುರಪುರ ತಾಲೂಕಿನಲ್ಲಿ ರಂಗ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಟಕ ಸಾಹಿತಿಗಳು, ಖಳನಟರು, ಹಾಸ್ಯ ಕಲಾವಿದರು, ನಾಯಕ ನಟರ ತವರು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನಲ್ಲಿ ರಂಗ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾಟಕ ಸಾಹಿತಿಗಳು, ಖಳನಟರು, ಹಾಸ್ಯ ಕಲಾವಿದರು, ನಾಯಕ ನಟರ ತವರು ಸುರಪುರ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಹೇಳಿದರು.

ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೋನ್ಹಾಳದ ಮೂಕನಾಯಕ ಸಾಂಸ್ಕೃತಿಕ ಕಲಾ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗ್ರಾಮೀಣ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿಗೆ ಮಲ್ಲೇಶಿ ಕೋನ್ಹಾಳ ಅವರ ಕೊಡುಗೆ ಅನನ್ಯ. ನಾಟಕ ಸಾಹಿತಿಗಳಾಗಿ ರಚಿಸಿರುವ 11 ನಾಟಕಗಳು ಒಂದಕ್ಕಿಂತ ಒಂದು ಅಮೋಘ. ತಮ್ಮ ಜೀವನವನ್ನು ರಂಗಭೂಮಿಗೆ ಮುಡಿಪಾಗಿರುವ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳು ಸಿಗಬೇಕು ಎಂದರು.

ಮುಖಂಡ ಶಿವರಾಯ ಕಾಡ್ಲೂರು ಮಾತನಾಡಿ, ತಾಲೂಕಿನಲ್ಲಿ ಪ್ರತಿವರ್ಷ ನೂರಾರು ನಾಟಕಗಳು ಪ್ರದರ್ಶಿತವಾಗುತ್ತವೆ. ರಂಗಭೂಮಿ ನಿರ್ಮಾಣದ ಅವಶ್ಯಕತೆ ಇದೆ. ರಂಗ ಕಲಾವಿದರಿಗೆ ಮಾಶಾಸನ ನೀಡಬೇಕು ಎಂದು ಆಗ್ರಹಿಸಿದರು.

ರಂಗ ಸಂಘಟಕ ಬಲಭೀಮನಾಯಕ ಭೈರಿಮರಡಿ, ಭೀಮರಾಯ ಮೂಲಿಮನಿ, ವೆಂಕಟೇಶ ಬೇಟೆಗಾರ, ಶರಣುನಾಯಕ ಭೈರಿಮರಡಿ, ಬಸವರಾಜ ಕೊಡೇಕಲ್, ಅಮರೇಶಗೌಡ ಸರ್ಜಾಪುರ, ಯಲ್ಲಪ್ಪ ಕಾಡ್ಲೂರು, ಡಿ.ಎನ್. ಹಳ್ಳಿ, ಈರಣ್ಣಗೌಡ ಗುಡಿಮನಿ ಇತರರಿದ್ದರು. ಕವಿ ಮಲ್ಲೇಶ ಕೋನ್ಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶನಾಯಕ ಭೈರಿಮರಡಿ ನಿರೂಪಿಸಿದರು. ದೇವಿಂದ್ರಪ್ಪ ಬಾದ್ಯಾಪುರ ಸ್ವಾಗತಿಸಿದರು. ರವಿನಾಯಕ ಭೈರಿಮರಡಿ ವಂದಿಸಿದರು.

ಯಲ್ಲಪ್ಪ ಹುಲಕಲ್, ಚಂದ್ರಕಾಂತ ಹುಲಕಲ್, ಪ್ರಕಾಶ ವಜ್ಜಲ, ರವಿಕಿರಣ ಸಿದ್ದಾಪುರ, ಶಂಕರ ವಾರಿಸಿದ್ದಾಪುರ, ಮೋಹನ ವೆಂಕಟಾಪುರ, ರಂಜಿತ್ ವೆಂಕಟಾಪುರ, ರಂಜಿತಾ ದುಧನಿ, ಸೀಮಾ ಮಹಿಂದ್ರಿಗಿ, ಭವಾನಿ ಬೆಂಗಳೂರು ಅವರು ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಗೆದ್ದರು.