ಸುರಗಿರಿ ಮಹಿಳಾ ಮಂಡಳಿ ವಾರ್ಷಿಕೋತ್ಸವ

| Published : Apr 28 2025, 12:45 AM IST

ಸಾರಾಂಶ

ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಠಾರದಲ್ಲಿ ಸುರಗಿರಿ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭವಾರ್ತೆ,ಮೂಲ್ಕಿ

ಉತ್ಸವದ ಸಂದರ್ಭ ದೇವರು ಗರ್ಭಗುಡಿಯಿಂದ ಹೊರಬಂದು ಭಕ್ತರಿಂದ ಸೇವೆಯನ್ನು ಪಡೆಯುವ ದಿನದಂದು ಮಹಿಳೆಯರು ಸೇರಿ ಒಂದು ಉತ್ತಮ ಕಾರ್ಯಕ್ರಮ ನಡೆಸುವುದು ಅಭಿನಂದನೀಯ ಎಂದು ಸಾಹಿತಿ ಸೌದಾಮಿನಿ ಶೆಟ್ಟಿ ಹೇಳಿದರು.

ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಠಾರದಲ್ಲಿ ಜರಗಿದ ಸುರಗಿರಿ ಮಹಿಳಾ ಮಂಡಳಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಉಪನ್ಯಾಸಕಿ ಆಶಾ ಕೀರ್ತಿ ಶೆಟ್ಟಿ ಮಾತನಾಡಿ, ನಾವು ಸಂಸ್ಕಾರವನ್ನು ಬೆಳೆಸುವುದರ ಜೊತೆಗೆ ನಮ್ಮ ಮಕ್ಕಳಿಗೂ ಸಂಸ್ಕಾರವನ್ನು ಮೈಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಸುರಗಿರಿ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಯೋಗಸಾಧಕಿ ಕು ಮೇಘಶ್ರೀ ಕೊಡೆತ್ತೂರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸುರಗಿರಿ ದೇವಳದ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಭಂಡಾರ ಮನೆ, ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಅಮಿತಾ ಶೆಟ್ಟಿ ವರದಿ ವಾಚಿಸಿದರು. ಸಂಸ್ಥೆಯ ಅಧ್ಯಕ್ಷೆ ಪ್ರಮೀಳಾ ವಿನಯ್ ಸ್ವಾಗತಿಸಿದರು, ನಿರ್ಮಲಾ ವಿ ನಾಯಕ್ ಶಶಿಕಲಾ ಸನ್ಮಾನ ಪತ್ರ ವಾಚಿಸಿದರು. ಸಮರ್ಪಿಸಿದರು, ಅರ್ಪಿತಾ ಶೆಟ್ಡಿ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.