ಸುರಗಿರಿ ದೇವಳ ಸಂಸ್ಕಾರ ಶಿಬಿರ ಸಮಾರೋಪ

| Published : May 20 2025, 01:05 AM IST

ಸಾರಾಂಶ

ಬ್ರಾಹ್ಮಣ ಸಮಾಜ ಟ್ರಸ್ಟ್ ಹಾಗೂ ಶಿವಳ್ಳಿ ಸ್ಪಂದನ ಕಟೀಲು ವಲಯದ ಸಹಭಾಗಿತ್ವದಲ್ಲಿ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಸ್ಕಾರ ಶಿಬಿರ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ನಮ್ಮ ದೇಶವು ಪ್ರತೀ ನೂರು ಕಿಲೋಮೀಟರ್ ಗಳಿಗೆ ತನ್ನ ಪ್ರಕೃತಿ ಮತ್ತು ಸಂಸ್ಕಾರ ವನ್ನು ಬದಲಿಸುತ್ತದೆ. ಇದು ನಮ್ಮ ವೈಶಿಷ್ಟ್ಯವಾಗಿದ್ದು ಅದನ್ನು ನಾವು ಉಳಿಸಿಕೊಳ್ಳಬೇಕೆಂದು ಗುರುಗಳಾದ ರವೀಂದ್ರ ಭಟ್ ಅತ್ತೂರು ಹೇಳಿದರು.

ಬ್ರಾಹ್ಮಣ ಸಮಾಜ ಟ್ರಸ್ಟ್ ಹಾಗೂ ಶಿವಳ್ಳಿ ಸ್ಪಂದನ ಕಟೀಲು ವಲಯದ ಸಹಭಾಗಿತ್ವದಲ್ಲಿ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 15 ದಿನಗಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿದ್ವಾನ್ ಅಂಗಡಿಮಾರ್ ವಿಶ್ವೇಶ ಭಟ್ ಆಶೀರ್ವಚನಗೈದರು. ಶಿಬಿರಾರ್ಥಿಗಳಾದ ಮನಿರತ್ನ, ಆರಾಧ್ಯ, ಸಾರ್ವಣಿ, ಕಾರ್ತಿಕ್ ಶಿಬಿರದಲ್ಲಿ ಕಲಿತ ಹಾಡು, ಭಜನೆ, ವಿಷ್ಣು ಸಹಸ್ರ ನಾಮ ಇತ್ಯಾದಿಗಳನ್ನು ಪ್ರಸ್ತುತಪಡಿಸಿದರು. ಸಾಮಾಜಿಕ ಕಾರ್ಯಕರ್ತ ಪಾರ್ಥಸಾರಥಿ ಪಂಜ, ಧಾರ್ಮಿಕ ದತ್ತಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯ ಕೊರಿಯರ್ ಸುಬ್ರಮಣ್ಯ ಪ್ರಸಾದ್, ಜ್ಯೋತಿಷಿ ವಿಶ್ವನಾಥ್ ಭಟ್, ಕೋಡು ಶ್ರೀನಿವಾಸ್ ಭಟ್ , ದೇವಿಕಾ ರಾವ್ ಪಡುಬಿದ್ರೆ, ರಘುರಾಮ್ ಭಟ್, ಸುರಗಿರಿ ದೇವಸ್ಥಾನ ದ ಆಡಳಿತ ಮೊಕ್ತೇಸರ ಅರವಿಂದ ಭಟ್ ಕುದುಕೊಳ್ಳಿ, ಡಾ. ಗುರುರಾಜ ಉಡುಪ ಕಿಲೆಂಜೂರು ಸುರೇಶ್ ರಾಜ್ ಭಟ್ ಕೋಡು, ಭರತ್ ರಾವ್ ಪಕ್ಷಿಕೆರೆ, ಸುಧೀಂಧ್ರ ಉಡುಪ ಮಾಡ, ಸುಧೀಂಧ್ರ ಉಡುಪ ಬೈಲು ಮತ್ತಿತರರಿದ್ದರು. ವೈಭವ್ ಭಟ್ ಉರ್ಮಿ ನಿರೂಪಿಸಿದರು.