ಪ್ರತ್ಯೇಕ ಪಾಲಿಕೆಗೆ ಬೆಲ್ಲದ ಕೂಗು ಅಚ್ಚರಿ..!

| Published : Dec 17 2023, 01:45 AM IST

ಪ್ರತ್ಯೇಕ ಪಾಲಿಕೆಗೆ ಬೆಲ್ಲದ ಕೂಗು ಅಚ್ಚರಿ..!
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷಗಳ ಹೋರಾಟದ ಫಲವಾಗಿ ಪ್ರತ್ಯೇಕ ಪಾಲಿಕೆ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಗೆ ಬಂದಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿಯೇ ಹೆಚ್ಚು ಮುನ್ನಲೆಗೆ ಬಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಕೂಗಿಗೆ ಸ್ಪಂದಿಸದ ಶಾಸಕ ಅರವಿಂದ ಬೆಲ್ಲದ ಅಧಿವೇಶನದಲ್ಲಿ ಧ್ವನಿ ಎತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹೋರಾಟ ಸಮಿತಿ ಸದಸ್ಯರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಬಿಜೆಪಿ ಅವಧಿಯಲ್ಲಿ ಹಲವು ಬಾರಿ ಬೆಲ್ಲದ ಅವರನ್ನು ಸಂಪರ್ಕಿಸಿದರೆ ಗಂಭೀರವಾಗಿ ತೆಗೆದುಕೊಳ್ಳದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ದೊಡ್ಡ ಧ್ವನಿಯಲ್ಲಿ ಪ್ರತ್ಯೇಕ ಪಾಲಿಕೆಯ ಬಗ್ಗೆ ಕೂಗುತ್ತಿದ್ದಾರೆ. ಇದು ಬೇಡಿಕೆ ಈಡೇರಿಕೆಯ ಭಾಗವಾಗಿ ಉತ್ತಮ ಬೆಳವಣಿಗೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇವೆ. ಆದರೆ, ಅಧಿವೇಶನದಲ್ಲಿ ಚರ್ಚೆ ಹಂತಕ್ಕೆ ಬರಲು ಅವರೊಬ್ಬರೇ ಕಾರಣರಲ್ಲ ಎಂದರು.

ಅದಕ್ಕೂ ಮುಂಚೆ ಎಚ್‌.ಕೆ. ಪಾಟೀಲರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಶಾಸಕ ವಿನಯ ಕುಲಕರ್ಣಿ, ಅಬ್ಬಯ್ಯ ಪ್ರಸಾದ, ಸಚಿವ ಸಂತೋಷ ಲಾಡ್‌ ಒಂದೂವರೆ ತಿಂಗಳಿಂದ ಇದಕ್ಕಾಗಿ ಪ್ರಯತ್ನ ನಡೆಸಿದ್ದರು. ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಪ್ರತ್ಯೇಕ ಪಾಲಿಕೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ಸಹ ನಡೆಸಿದ್ದರು. ಹೋರಾಟದ ಸ್ಥಳಕ್ಕೆ ಬಂದು ವಿನಯ ಕುಲಕರ್ಣಿ ಭರವಸೆ ಸಹ ನೀಡಿದ್ದರು. ಇನ್ನೇನು ಅಧಿವೇಶನದಲ್ಲಿ ವಿನಯ ಕುಲಕರ್ಣಿ ಪ್ರಶ್ನಿಸಬೇಕು ಎನ್ನುವಷ್ಟರಲ್ಲಿ ಸಮಯದ ಅವಕಾಶ ಪಡೆದು ಶಾಸಕ ಬೆಲ್ಲದ ಅವರು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಯಾರೇ ಆಗಲಿ ಅಧಿವೇಶನದಲ್ಲಿ ಚರ್ಚೆಗೆ ಬಂದಿರುವುದು ಹೋರಾಟಕ್ಕೆ ಸಿಕ್ಕ ಫಲ. ಒಟ್ಟಾರೆ ಪ್ರತ್ಯೇಕ ಪಾಲಿಕೆ ಬಗ್ಗೆ ಸರ್ಕಾರದ ಗಮನ ಸೆಳದಿದ್ದು ಈ ಎಲ್ಲರಿಗೂ ಕೃತಜ್ಞತೆ ಸಲ್ಲಬೇಕು. ಜತೆಗೆ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಿ ಮುಂದಿನ ಕಾರ್ಯಸೂಚಿ ಮಾಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವೆಂಕಟೇಶ ಮಾಚಕನೂರ, ವಿಠ್ಠಲ ಕಮ್ಮಾರ, ರವಿಕುಮಾರ ಮಾಳಿಗೇರ, ವಸಂತ ಅರ್ಕಾಚಾರ, ಶಂಕರ ನೀರಾವರಿ ಮತ್ತಿತರರು ಇದ್ದರು.ಕನ್ನಡಪ್ರಭ ವಾರ್ತೆ ಧಾರವಾಡ

ಹಲವು ವರ್ಷಗಳ ಹೋರಾಟದ ಫಲವಾಗಿ ಪ್ರತ್ಯೇಕ ಪಾಲಿಕೆ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಗೆ ಬಂದಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿಯೇ ಹೆಚ್ಚು ಮುನ್ನಲೆಗೆ ಬಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಕೂಗಿಗೆ ಸ್ಪಂದಿಸದ ಶಾಸಕ ಅರವಿಂದ ಬೆಲ್ಲದ ಅಧಿವೇಶನದಲ್ಲಿ ಧ್ವನಿ ಎತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹೋರಾಟ ಸಮಿತಿ ಸದಸ್ಯರು ಹೇಳಿದ್ದಾರೆ.

ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಬಿಜೆಪಿ ಅವಧಿಯಲ್ಲಿ ಹಲವು ಬಾರಿ ಬೆಲ್ಲದ ಅವರನ್ನು ಸಂಪರ್ಕಿಸಿದರೆ ಗಂಭೀರವಾಗಿ ತೆಗೆದುಕೊಳ್ಳದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ದೊಡ್ಡ ಧ್ವನಿಯಲ್ಲಿ ಪ್ರತ್ಯೇಕ ಪಾಲಿಕೆಯ ಬಗ್ಗೆ ಕೂಗುತ್ತಿದ್ದಾರೆ. ಇದು ಬೇಡಿಕೆ ಈಡೇರಿಕೆಯ ಭಾಗವಾಗಿ ಉತ್ತಮ ಬೆಳವಣಿಗೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇವೆ. ಆದರೆ, ಅಧಿವೇಶನದಲ್ಲಿ ಚರ್ಚೆ ಹಂತಕ್ಕೆ ಬರಲು ಅವರೊಬ್ಬರೇ ಕಾರಣರಲ್ಲ ಎಂದರು.

ಅದಕ್ಕೂ ಮುಂಚೆ ಎಚ್‌.ಕೆ. ಪಾಟೀಲರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಶಾಸಕ ವಿನಯ ಕುಲಕರ್ಣಿ, ಅಬ್ಬಯ್ಯ ಪ್ರಸಾದ, ಸಚಿವ ಸಂತೋಷ ಲಾಡ್‌ ಒಂದೂವರೆ ತಿಂಗಳಿಂದ ಇದಕ್ಕಾಗಿ ಪ್ರಯತ್ನ ನಡೆಸಿದ್ದರು. ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಪ್ರತ್ಯೇಕ ಪಾಲಿಕೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ಸಹ ನಡೆಸಿದ್ದರು. ಹೋರಾಟದ ಸ್ಥಳಕ್ಕೆ ಬಂದು ವಿನಯ ಕುಲಕರ್ಣಿ ಭರವಸೆ ಸಹ ನೀಡಿದ್ದರು. ಇನ್ನೇನು ಅಧಿವೇಶನದಲ್ಲಿ ವಿನಯ ಕುಲಕರ್ಣಿ ಪ್ರಶ್ನಿಸಬೇಕು ಎನ್ನುವಷ್ಟರಲ್ಲಿ ಸಮಯದ ಅವಕಾಶ ಪಡೆದು ಶಾಸಕ ಬೆಲ್ಲದ ಅವರು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಯಾರೇ ಆಗಲಿ ಅಧಿವೇಶನದಲ್ಲಿ ಚರ್ಚೆಗೆ ಬಂದಿರುವುದು ಹೋರಾಟಕ್ಕೆ ಸಿಕ್ಕ ಫಲ. ಒಟ್ಟಾರೆ ಪ್ರತ್ಯೇಕ ಪಾಲಿಕೆ ಬಗ್ಗೆ ಸರ್ಕಾರದ ಗಮನ ಸೆಳದಿದ್ದು ಈ ಎಲ್ಲರಿಗೂ ಕೃತಜ್ಞತೆ ಸಲ್ಲಬೇಕು. ಜತೆಗೆ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಿ ಮುಂದಿನ ಕಾರ್ಯಸೂಚಿ ಮಾಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವೆಂಕಟೇಶ ಮಾಚಕನೂರ, ವಿಠ್ಠಲ ಕಮ್ಮಾರ, ರವಿಕುಮಾರ ಮಾಳಿಗೇರ, ವಸಂತ ಅರ್ಕಾಚಾರ, ಶಂಕರ ನೀರಾವರಿ ಮತ್ತಿತರರು ಇದ್ದರು.