ಸುರಪುರ: ಬಿಜೆಪಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

| Published : Feb 11 2024, 01:47 AM IST

ಸಾರಾಂಶ

ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಭಾರತ ಪರಿವರ್ತನೆ ಆಗುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮವು ಅಭಿವೃದ್ಧಿ ಹೊಂದುವುದು ಪ್ರಧಾನಿಯವರ ಆಸೆಯಾಗಿದೆ

ಕನ್ನಡಪ್ರಭ ವಾರ್ತೆ ಸುರಪುರ

ಬಿಜೆಪಿ ಸುರಪುರ ಮಂಡಲ ವತಿಯಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಮುಖಂಡರು, ಗ್ರಾಮ ಚಲೋ ಅಭಿಯಾನವೂ ಸುರಪುರ ಮತಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿಯವರ ಆಸೆಯಂತೆ ಗ್ರಾಮ ಚಲೋ ಅಭಿಯಾನ ನಡೆಯುತ್ತದೆ. ಪ್ರತಿಯೊಂದು ಗ್ರಾಮಗಳು ಮತ್ತು ಬೂತ್ ಮಟ್ಟಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯ ಜನರಿಗೆ ತಿಳಿಸಲಾಗುತ್ತದೆ. ಅಲ್ಲದೆ ಗ್ರಾಮಗಳು ಅಭಿವೃದ್ಧಿಯಾಗಲೂ ಬೇಕಾಗಿರುವ ಹಲವು ಅಂಶಗಳ ಪಟ್ಟಿ ಮಾಡಲಾಗುತ್ತದೆ ಎಂದರು.

ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಭಾರತ ಪರಿವರ್ತನೆ ಆಗುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮವು ಅಭಿವೃದ್ಧಿ ಹೊಂದುವುದು ಪ್ರಧಾನಿಯವರ ಆಸೆಯಾಗಿದೆ. ಅದರಂತೆ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು. ರಾಷ್ಟ್ರವು ಅಭಿವೃದ್ಧಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವುದೇ ಬಿಜೆಪಿಯ ಕನಸಾಗಿದೆ ಎಂದು ತಿಳಿಸಿದರು.

ಕಲಬುರಗಿ ಜಿಲ್ಲೆ ಬಿಜೆಪಿ ಮಾಜಿ ಅಧ್ಯಕ್ಷ ಸಿದ್ದಾಜಿ ಪಾಟೀಲ್, ಅಭಿಯಾನದ ತಾಲೂಕು ಸಂಚಾಲಕ ರಾಜಾ ಮುಕುಂದ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ, ಜಿಲ್ಲಾ ಸಂಚಾಲಕ ಬಸನಗೌಡ ಯಡಿಯಾಪುರ, ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ, ಬಿಜೆಪಿ ಮುಖಂಡ ಡಾ. ಸುರೇಶ್ ಸಜ್ಜನ್, ಮುಖಂಡರಾದ ಸಿದ್ದಣ್ಣ ಚೌದ್ರಿ ಮುತ್ಯಾ, ಸೋಮನಗೌಡ, ಸ್ಥಳೀಯ ಮುಖಂಡರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.