ಸುರಪುರ ನಗರದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿ ರಾಜಾ ಶ್ರೀರಾಮ ನಾಯಕ, ರಾಜಾ ರೂಪಕುಮಾರ ನಾಯಕ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಆರ್ ಕೆ ಎನ್ ಟ್ರೋಫಿ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಸುರಪುರ ನಗರದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿ ರಾಜಾ ಶ್ರೀರಾಮ ನಾಯಕ, ರಾಜಾ ರೂಪಕುಮಾರ ನಾಯಕ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ಆರ್ ಕೆ ಎನ್ ಟ್ರೋಫಿ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ. ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ನಮ್ಮ ಚಿಕ್ಕಪ್ಪ ರಾಜಾ ಶ್ರೀರಾಮ ನಾಯಕ ಅವರು ಉತ್ತಮ ಕ್ರೀಡಾಪಟುವಾಗಿದ್ದರು. ಅವರು ಮೊದಲು ಪಂದ್ಯಾವಳಿಯನ್ನು ಆರಂಭಿಸಿದರು. ಈಗ ಅವರಿಲ್ಲ ಎನ್ನುವುದು ತುಂಬಾ ನೋವು ಉಂಟುಮಾಡುತ್ತದೆ ಎಂದರು. ನಮ್ಮ ಎಲ್ಲಾ ಅಣ್ಣತಮ್ಮಂದಿರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಬೆಂಬಲ ಸದಾ ಕಾಲ ಹೀಗೆ ಇರಲಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸುರಪುರ ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ, ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠಲ್ ಯಾದವ್, ವೆಂಕೋಬ ಯಾದವ್, ರಾಜಾ ವಾಸುದೇವ ನಾಯಕ, ಬಸವರಾಜ ಜಮದರಖಾನಿ, ರಾಜಾ ಸಂತೋಷ ನಾಯಕ, ರಾಜಾ ಕುಮಾರ ನಾಯಕ, ವೇಣುಗೋಪಾಲ ಜೇವರ್ಗಿ, ನಿಂಗಣ್ಣ ಬಾಚಿಮಟ್ಟಿ, ಉದ್ಯಮಿ ಗ್ಯಾನಚಂದ್ ಜೈನ್, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ್ ನಾಯಕ, ಗುಂಡಪ್ಪ ಸೋಲಾಪುರ, ಪಿ.ಐ ಉಮೇಶ ಎಂ, ವೆಂಕಟೇಶ ಹೊಸಮನಿ, ರಾಜಾ ಪಿಡ್ಡ ನಾಯಕ ತಾತಾ, ಅಬ್ದುಲ್ ಗಫೂರ್ ನಗನೂರಿ, ರವಿಚಂದ್ರ ಸಾಹುಕಾರ್, ಭೀಮರಾಯ ಮೂಲಿಮನಿ, ಬೀರಲಿಂಗ ಬಾದ್ಯಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.