ವಚನಗಳ ಮೂಲಕ ಸಮಾಜ ಸುಧಾರಣೆಗೆ ಶರಣರು: ಕಾಶಿನಾಥ ಬಿಳಿಮಗ್ಗದ

| Published : Oct 29 2025, 01:45 AM IST

ಸಾರಾಂಶ

12ನೇ ಶತಮಾನದ ಶರಣರು ಜೀವನದ ಮೌಲ್ಯಗಳನ್ನು ವಚನಗಳ ಮೂಲಕ ಬಿಂಬಿಸಿದ್ದಾರೆ. ಸೂಳೆ ಸಂಕವ್ವನ ವಚನದಲ್ಲಿ ನೂರಾರು ವಿಷಯ ಅಡಗಿರುವುದನ್ನು ಕಾಣಬಹುದು.

ಮುಂಡರಗಿ: ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗಳು ಅನುಭವ ಮಂಟಪದ ಸಂಪರ್ಕದಿಂದ ತಮ್ಮ ಅನುಭಾವದಿಂದ ವಚನಗಳನ್ನು ರಚಿಸಿ ಸಮಾಜ ಬದಲಾವಣೆಗೆ ಶ್ರಮಿಸಿದರು. 12ನೇ ಶತಮಾನದ ಬಸವಾದಿ ಶಿವಶರಣರು ಕೇವಲ ನುಡಿಯಲಿಲ್ಲ, ನುಡಿದಂತೆ ನಡೆದರು ಎಂದು ಪತ್ರಕರ್ತ ಕಾಶಿನಾಥ ಬಿಳಿಮಗ್ಗದ ತಿಳಿಸಿದರು.ಭಾನುವಾರ ಸಂಜೆ ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆ ಸೌರಭದಲ್ಲಿ ಕಸಾಪ ಹಾಗೂ ಶಸಾಪ ಆಶ್ರಯದಲ್ಲಿ ಜರುಗಿದ ಶರಣ ಚಿಂತನ ಮಾಲೆಯಲ್ಲಿ ಶರಣೆ ಸೂಳೆ ಸಂಕವ್ವ ಕುರಿತು ಉಪನ್ಯಾಸ ನೀಡಿದ ಅವರು, 12ನೇ ಶತಮಾನದ ಶರಣರು ಜೀವನದ ಮೌಲ್ಯಗಳನ್ನು ವಚನಗಳ ಮೂಲಕ ಬಿಂಬಿಸಿದ್ದಾರೆ. ಸೂಳೆ ಸಂಕವ್ವನ ವಚನದಲ್ಲಿ ನೂರಾರು ವಿಷಯ ಅಡಗಿರುವುದನ್ನು ಕಾಣಬಹುದು ಎಂದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ವಚನಗಳ ಮೇಲೆ ಎಲ್ಲರೂ ಮಾತನಾಡುತ್ತೇವೆ. ಆದರೆ ಆಚರಣೆಯಲ್ಲಿ ಬಹಳಷ್ಟು ಹಿಂದೆ ಉಳಿದಿದ್ದೇವೆ. ಅವರ ವಿಚಾರಗಳ ನೆಲೆಗಟ್ಟನ್ನು ಅವಲೋಕಿಸಿದಾಗ ಎಲ್ಲರೂ ಸಮಾಜದಲ್ಲಿ ಸಮಾನರು. ಎಲ್ಲರೂ ಎಲ್ಲ ಹಕ್ಕುಗಳಿಗೆ ಅರ್ಹರು ಎಂಬುದು ಅರಿತುಕೊಳ್ಳಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೀಘ್ರದಲ್ಲಿ ಕನ್ನಡ ಸಾಹಿತ್ಯ ಭವನ ಪೂರ್ಣಗೊಳ್ಳಲಿದ್ದು, ಮುಂದೆ ಅಲ್ಲಿಯೇ ಸಾಹಿತ್ಯ ಚಟುವಟಿಕೆಗಳು ನಡೆಯಲಿವೆ ಎಂದರು.ಕಾರ್ಯಕ್ರಮದಲ್ಲಿ ಎಸ್‌ಬಿ.ಕೆ. ಗೌಡರ, ವಿ.ಎಫ್. ಗುಡದಪ್ಪನವರ, ಸಂತೋಷ ಹಿರೇಮಠ, ಎನ್.ಎಸ್. ಅಲ್ಲಿಪುರ, ಸಿ.ಕೆ. ಗಣಪ್ಪನವರ, ಸುರೇಶ ಭಾವಿಹಳ್ಳಿ, ಎಂ.ಐ. ಮುಲ್ಲಾ, ಜಯಶ್ರೀ ಅಳವಂಡಿ, ಮಧುಮತಿ ಇಳಕಲ್, ಎಂ.ಎಸ್. ಶೀರನಹಳ್ಳಿ, ಆರ್.ಕೆ. ರಾಯನಗೌಡ್ರ, ಯುವರಾಜ ಮುಂಡರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೊಟ್ರೇಶ ಜವಳಿ ಪ್ರಾರ್ಥಿಸಿದರು. ಪ್ರೊ. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿದರು. ರಮೇಶ ಪಾಟೀಲ ವಂದಿಸಿದರು.