ನರಸಿಂಹರಾಜಪುರ: ರಾಜ್ಯ ಸರ್ಕಾರ ಎನ್.ಆರ್.ಪುರ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕೆಂದು ಘೋಷಿಸಿದ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಬೆಳೆ ಹಾನಿಯನ್ನು ನಿಖರವಾಗಿ ದಾಖಲಿಸುವ ಉದ್ದೇಶದಿಂದ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರನ್ನೊಳಗೊಂಡ ಜಂಟಿ ತಂಡದಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಡಾ.ನೂರುಲ್‌ ಹುದಾ ತಿಳಿಸಿದರು.

ನಿಖರವಾದ ಬೆಳೆ ಹಾನಿ ದಾಖಲಿಸಲು ಜಂಟಿ ಸಮೀಕ್ಷೆ

ನರಸಿಂಹರಾಜಪುರ: ರಾಜ್ಯ ಸರ್ಕಾರ ಎನ್.ಆರ್.ಪುರ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕೆಂದು ಘೋಷಿಸಿದ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಬೆಳೆ ಹಾನಿಯನ್ನು ನಿಖರವಾಗಿ ದಾಖಲಿಸುವ ಉದ್ದೇಶದಿಂದ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರನ್ನೊಳಗೊಂಡ ಜಂಟಿ ತಂಡದಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಡಾ.ನೂರುಲ್‌ ಹುದಾ ತಿಳಿಸಿದರು.

ಪತ್ರಿಕಾ ಹೇಳಿಕೆ ನೀಡಿ, ತಾಲೂಕಿನ ಎಲ್ಲಾ ರೈತರು ತಮ್ಮ ಗ್ರಾಮಗಳಿಗೆ ಆಗಮಿಸುವ ಕಂದಾಯ, ಕೃಷಿ ಹಾಗೂ ತೋಟ ಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಜಂಟಿ ಬೆಳೆ ಸಮೀಕ್ಷೆಗೆ ಅಗತ್ಯ ಸಹಕಾರ ನೀಡಬೇಕು. ಬೆಳೆ ಹಾನಿ ಪರಿಹಾರಕ್ಕೆ ಬೆಳೆ ಸಮೀಕ್ಷೆ ಅತ್ಯಂತ ಮುಖ್ಯ. ಬೆಳೆ ಹಾನಿಗೆ ಸಂಬಂಧಿಸಿದಂತೆ ಬೆಳೆ ಸಮೀಕ್ಷೆಯಲ್ಲಿ ಬೆಳೆ ದಾಖಲೆ ಯಾಗಿರುವುದು ಕಡ್ಡಾಯ. ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ಮತ್ತು ಜಂಟಿ ಬೆಳೆ ಹಾನಿ ಸಮೀಕ್ಷೆಯಲ್ಲಿ ದಾಖ ಲಾಗದ ಅಥವಾ ಬೆಳೆ ವಿವರ ಹೊಂದಾಣಿಕೆಯಾಗದ ಸಂದರ್ಭಗಳಲ್ಲಿ ಬೆಳೆ ಹಾನಿ ಪರಿಹಾರ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ತಾಲೂಕಿನ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರವನ್ನು ಬೆಳೆ ಸಮೀಕ್ಷೆ (ಕ್ರಾಪ್ ಸರ್ವೆ) ಆ್ಯಪ್‌ನಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಗ್ರಾಮದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯೊಂದಿಗೆ ರೈತರು ಸಮನ್ವಯ ಸಾಧಿಸಿ ತಮ್ಮ ಜಮೀನಿನ ಬೆಳೆ ವಿವರ ಬೆಳೆ ಸಮೀಕ್ಷೆಯಲ್ಲಿ ದಾಖಲಿಸಬೇಕು. ಒಂದು ವೇಳೆ ಗ್ರಾಮದಲ್ಲಿ ನಿಯೋಜಿತ ಪಿಆರ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ ರೈತರು ಸ್ವತಃ ಕ್ರಾಪ್ ಸರ್ವೇ ಆ್ಯಪ್ ಮೂಲಕ ತಮ್ಮ ಬೆಳೆ ವಿವರ ದಾಖಲಿಸುವಂತೆ ಮನವಿ ಮಾಡಿದ್ದಾರೆ.