ಸಾರಾಂಶ
ವಿಶ್ವಪ್ರಸಿದ್ಧ ಮಧುಗಿರಿ ಏಕಶಿಲಾ ಗಿರಿಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಸರ್ವೇ ಕಾರ್ಯ ಪ್ರಾರಂಭಗೊಂಡಿದೆ. ಈ ನಿಟ್ಟಿನಲ್ಲಿ ಸೋಮವಾರ ಬೆಟ್ಟಕ್ಕೆ ರೋಪವೇ ಅಳವಡಿಸಲು ಡೈನಾಮಿಕ್ಸ್ ಪ್ರೈವೈಟ್ ಲಿಮಿಟೆಡ್ ನ ಪಿಆರ್‌ಪಿ ಭರತ್ ಜೈನ್ ತಂಡ ಭೇಟಿ ನೀಡಿ, ಬೆಟ್ಟದ ಬುಡದಿಂದ ಮೇಲಿನ ತುದಿವರೆಗೆ ರೋಪ್‌ವೇ ಹಾಕಲು ಏನೆಲ್ಲಾ ಮಾಡಬಹುದು ಎಂಬುದಾಗಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ವಿಶ್ವಪ್ರಸಿದ್ಧ ಮಧುಗಿರಿ ಏಕಶಿಲಾ ಗಿರಿಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಸರ್ವೇ ಕಾರ್ಯ ಪ್ರಾರಂಭಗೊಂಡಿದೆ. ಈ ನಿಟ್ಟಿನಲ್ಲಿ ಸೋಮವಾರ ಬೆಟ್ಟಕ್ಕೆ ರೋಪವೇ ಅಳವಡಿಸಲು ಡೈನಾಮಿಕ್ಸ್ ಪ್ರೈವೈಟ್ ಲಿಮಿಟೆಡ್ ನ ಪಿಆರ್‌ಪಿ ಭರತ್ ಜೈನ್ ತಂಡ ಭೇಟಿ ನೀಡಿ, ಬೆಟ್ಟದ ಬುಡದಿಂದ ಮೇಲಿನ ತುದಿವರೆಗೆ ರೋಪ್‌ವೇ ಹಾಕಲು ಏನೆಲ್ಲಾ ಮಾಡಬಹುದು ಎಂಬುದಾಗಿ ಪರಿಶೀಲಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ರೋಪವೇ ಕಾಮಗಾರಿಗೂ ಕೂಡಾ ಡೈನಾಮಿಕ್ಸ್ ರೋಪವೇ ಪ್ರೈವೇಟ್ ಲಿಮಿಟೆಡ್ ಪಿ.ಆರ್.ಪಿ.ಭರತ್ ಜೈನ್ ಸರ್ವೇ ಮಾಡಿದ್ದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಏಕಶಿಲಾ ಬೆಟ್ಟದ ತಪ್ಪಲಿನಿಂದ ಒಂದು ಸರ್ವೇ ಮತ್ತು ಸಿದ್ದರಕಟ್ಟೆ ಮಾರ್ಗದಿಂದ ಒಂದು ಸರ್ವೇ ಮಾಡಿದ್ದು, ಇವೆರಡರಲ್ಲಿ ಯಾವುದು ಸೂಕ್ತ ಮತ್ತು ಅನುಕೂಲ ಎಂದು ನೋಡಿಕೊಂಡು ತಜ್ಞರು ಭೇಟಿ ನೀಡಿ ಪರಿಶೀಲಿಸಿದ ನಂತರ ಕೆಲವು ತಿಂಗಳುಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.
ರಾಜ್ಯ ಸಹಕಾರ ಮಹಾ ಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಸದಸ್ಯರಾದ ಎಂ.ವಿ. ಮಂಜುನಾಥ್ ಆಚಾರ್, ಲಾಲಪೇಟೆ ಮಂಜುನಾಥ್, ಮುಖಂಡರಾದ ತುಂಗೋಟಿ ರಾಮಣ್ಣ, ಟಿ.ಡಿ.ಅಶ್ವತ್ಥ್, ಮನು, ದೀಪು, ಬೀಮಾ, ಕಿಶೋರ್ ಸೇರಿದಂತೆ ಇತರರಿದ್ದರು.