ಸಾರಾಂಶ
ಗದಗ: ಉತ್ತರ ಕರ್ನಾಟಕದ ಮೂಲ ಜಾನಪದ ಶೈಲಿಯ ಮೂಡಲಪಾಯದ ಬೆಳತನಕ ಆಡುವ ದೊಡ್ಡಾಟವಾಗಿದೆ. ಅದರ ಉಳಿವು, ಬೆಳವಣಿಗೆಯೇ ನನ್ನ ಜೀವನದ ಗುರಿಯಾಗಿದೆ ಎಂದು ಅಶೋಕ ಸುತಾರ ಹೇಳಿದರು.
ಅವರು ಪ್ರೋಬಸ್ ಕ್ಲಬ್ ಕಾರ್ಯಕ್ರಮದಲ್ಲಿ ವಿಶ್ವ ರಂಗಭೂಮಿ ದಿನದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ನನ್ನಜ್ಜ, ತಂದೆಯಿಂದ ಬಂದ ರಕ್ತಗತವಾದ ಈ ಕಲೆಯನ್ನು ನಾನು ನನ್ನ ಮಗಳು ನಿಖಿತಾ, ಮಗ ಮನೋಜಕುಮಾರ ಎಲ್ಲರೂ ದೊಡ್ಡಾಟ ಉಸಿರಾಗಿಸಿಕೊಂಡಿದ್ದೇವೆ. ಬೆಟಗೇರಿಯ ನಮ್ಮ ಕಾಳಿಕಾದೇವಿ ಮಂದಿರದ ಆವರಣದಲ್ಲಿ ಶಿವಾಜಿನಗರದ ಓಣಿಯಲ್ಲಿರುವ ಆಸಕ್ತರಿಗೆ ಬಯಲಾಟದ ಮೂಲಗತ್ತುಗಳನ್ನು ಕಲಿಸಿ ತರಬೇತಿ ಕೊಟ್ಟು ನಾಡಿನಾದ್ಯಂತ ಎರಡು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕೊಟ್ಟ ಸಂತೋಷ ನನ್ನದು ಜೊತೆಗೆ ಬೆಟಗೇರಿಯ ಹೊಸಗರಡಿ ಕಲಾ ತಂಡದ ಸಹಕಾರವಿದೆ.
ಕೃಷಿಕರು, ಬಡಿಗತನ, ಕಮ್ಮಾರರು ಮುಂತಾದ ಕುಲಕಸುಬಿನವರು ಇಂದು ನಮ್ಮ ಸುತಾರ ಸಾಂಸ್ಕೃತಿಕ ಕಲಾ ಸಂಘದಲ್ಲಿ ಪರಿಣಿತ ಕಲಾವಿದರಾಗಿ ಹಂಪಿ ಉತ್ಸವ, ಮೈಸೂರು ದಸರಾ, ಗದಗ, ವಿಜಯಪುರ, ಬಾಗಲಕೋಟ, ಜಮಖಂಡಿ, ಬಳ್ಳಾರಿ, ಧಾರವಾಡ, ಬೆಂಗಳೂರಿನ ಕಲಾಕ್ಷೇತ್ರ, ಟೌನ್‌ಹಾಲ್, ಮಹಾರಾಷ್ಟ್ರದ ಸೊಲ್ಲಾಪೂರದಲ್ಲಿ ಮೂಡಲಪಾಯದ ರತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಕುರುಕ್ಷೇತ್ರ, ರಾಮಾಯಣ, ಶ್ರೀದೇವಿ ಮಹಾತ್ಮೆ, ಸುಗಂಧ ಪುಷ್ಪ ಹರಣ ಮುಂತಾದ ಪ್ರಸಂಗಗಳನ್ನು ಅಭಿನಯಿಸಿ ಬಯಲಾಟ ಪ್ರಿಯರಷ್ಟೇ ಅಲ್ಲ ಎಲ್ಲ ಜನರ ಮೆಚ್ಚುಗೆಗೆ ಪಾತ್ರನಾಗಿದ್ದೇನೆ, ರೇಡಿಯೋ, ದೂರದರ್ಶನದಲ್ಲಿ ನಮ್ಮ ದೊಡ್ಡಾಟಗಳು ಪ್ರಸಾರವಾಗಿವೆ ಎಂದರು.ನಿಖಿತಾ ಸುತಾರ, ನಿಜಲಿಂಗಪ್ಪ ಕರಿಬಿಷ್ಠಿ, ಬಸವರಾಜ ಕರಿಬಿಷ್ಟಿ, ಬಾಳಪ್ಪ ಮನಗೂಳಿ, ಶಂಕ್ರಪ್ಪ ವ್ಹಿ. ಬಡಿಗೇರ, ಅಂಬರೇಶ ಕರಿಬಿಷ್ಠಿ, ಸುಭಾಸ ಗೂಳಪ್ಪ ಮಳಗಿ ಇವರು ತಂಡದ ಕೆಲ ಕಲಾವಿದರು. ಈ ತಿಂಗಳ ಜನಿಸಿದ ದಾಸೋಹ ಗೈದ ಬಿ.ಎಚ್.ಗರಡಿಮನಿ, ಬಿ.ಜಿ. ಸ್ವಾಮಿ, ಸುರೇಶ ಬಿ. ಅಂಗಡಿ, ರಾಚಯ್ಯ ಎ ಹಿರೇಮಠ, ಮಲ್ಲಣ್ಣ ರಾಟಿ, ಎಸ್.ಎಫ್.. ಬೆನಕಣ್ಣವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕೆ.ಎಸ್. ಗುಗ್ಗರಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.ಕ್ಲಬ್‌ನ ಅಧ್ಯಕ್ಷ ಬಸವರಾಜ ತೋಟಿಗೇರ ಮುಂತಾದವರು ಮಾತನಾಡಿದರು.ಸುಧಾ ಬಳ್ಳಿ ಪ್ರಾರ್ಥಿಸಿದರು. ಅಧ್ಯಕ್ಷರಿಗೆ ರಾಚಯ್ಯ ಹಿರೇಮಠ ಕಾಲರ ಧಾರಣ ಮಾಡಿದರು. ಪ್ರೊ. ಕೆ.ಎಚ್. ಬೇಲೂರ ಸ್ವಾಗತಿಸಿದರು. ವಾರ್ತಾಧಿಕಾರಿ ಬಸವರಾಜ ಗಣಪ್ಪನವರ ಅತಿಥಿಗಳ ಪರಿಚಯ ಮಾಡಿದರು. ಸುರೇಖಾ ಬಳ್ಳಿ ನಿರೂಪಿಸಿದರು. ಗಿಡ್ನಂದಿ ದಂಪತಿಗಳು, ರತ್ನಾ ಪುರಂದರೆ, ಎ.ಎನ್. ಬಸ್ತಿ, ರಾಜಶೇಖರ ಹಿರೇಮಠ, ಚೆನ್ನಯ್ಯ ಹಿರೇಮಠ, ನಾರಾಯಣಪೂರ, ನಾಲ್ವತ್ವಾಡಮಠ ಮುಂತಾದ ಹಿರಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.