ಸಾರಾಂಶ
ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಥ ಬೀದಿಯಲ್ಲಿ ಸೂರ್ಯ ಮಂಡಲೋತ್ಸವ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ರಥಸಪ್ತಮಿಯ ಪ್ರಯುಕ್ತ ಬುಧವಾರ ಸೂರ್ಯ ಮಂಡಲೋತ್ಸವ, ಸಂಪ್ರದಾಯದ ಆಚರಣೆಯಂತೆ ಅದ್ಧೂರಿಯಾಗಿ ಜರುಗಿತು.ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ, ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ತಧಿ ಆರಾಧನೆ ಸೇವೆ, ನೈವೇಧ್ಯ, ಸಹಸ್ರ ನಾಮಾರ್ಚನೆ, ಮಂಗಳಾರತಿ ನಡೆಸಲಾಯಿತು. ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಥ ಬೀದಿಯಲ್ಲಿ ಸೂರ್ಯ ಮಂಡಲೋತ್ಸವ ನಡೆಸಲಾಯಿತು. ಉತ್ಸವದ ಬಳಿಕ ದೇವಾಲಯದಲ್ಲಿ ಪ್ರಾಕಾರೋತ್ಸವ, ಸಂಪ್ರದಾಯದ ಆಚರಣೆಯಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು.
ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ನಾರಾಯಣ ಭಟ್ಟರು, ರಾಮ ಪ್ರಸಾದ್ ಭಟ್ಟರು, ಸಿಂಹಾದ್ರಿ ನರಸಿಂಹನ್, ಶ್ರೀಕಂಠಪ್ರಸಾದ್, ನಾಗರಾಜು, ವಿಜಿಕುಮಾರ್, ಪಟ್ಟಾಭಿರಾಮ್ ಪೂಜಾ ಕೈಂಕರ್ಯ ನೆರವೇರಿಸಿದರು.ಪೂಜಾ ಮಹೋತ್ಸವದಲ್ಲಿ ವೈ.ಕೆ.ಸತ್ಯನಾರಾಯಣ, ಪ್ರವೀಣ್ ಕುಮಾರ್, ಪ್ರದೀಪ್, ಪ್ರಖ್ಯಾತ್, ಜಯಲಕ್ಷ್ಮೀ, ಕೆ.ಆರ್.ಸುದರ್ಶನ್ ಬಾಬು, ಚಂದನ ಸುದರ್ಶನ್, ಎಂ.ಎಸ್.ಜನಾರ್ದನ್, ರಾಜು, ಚಲುವ, ವೆಂಕಟೇಶ್ ಯಾದವ್ ಜಿ., ಅಭಿಲಾಷ್, ನಾಗೇಂದ್ರ ಶೆಟ್ಟರು, ಎಚ್.ಜಿ.ವೆಂಕಟಪ್ಪ, ಚಂದ್ರಕಲಾ, ಲೋಕೇಶ್, ಶಿವಕುಮಾರ್, ಇತರರು ಇದ್ದರು.