ಸೂರ್ಯನಾರಾಯಣಗೆ ಪತ್ರಕರ್ತರ ಸಂಘದಿಂದ ಸನ್ಮಾನ

| Published : Jun 09 2024, 01:30 AM IST

ಸಾರಾಂಶ

ಚಾಮರಾಜನಗರದಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ಪ್ರಜಾವಾಣಿ ಜಿಲ್ಲಾ ವರದಿಗಾರ ವಿ.ಸೂರ್ಯನಾರಾಯಣ ಅವರನ್ನು ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಚಾಮರಾಜನಗರ ಜಿಲ್ಲೆ ವೃತ್ತಿ ಜೀವನದಲ್ಲಿ ಒಳ್ಳೆಯ ಅನುಭವ ನೀಡಿದೆ ಎಂದು ಬೆಂಗಳೂರಿಗೆ ವರ್ಗಾವಣೆಗೊಂಡ ಪ್ರಜಾವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ವಿ.ಸೂರ್ಯನಾರಾಯಣ ಅವರು ತಿಳಿಸಿದರು.

ಚಾ.ನಗರದಿಂದ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆ ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಚಾ.ನಗರ ಜಿಲ್ಲೆಯಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ಮಾಡಲು ಅವಕಾಶವಿದ್ದು, ಇಲ್ಲಿನ ಜನತೆ ಮತ್ತು ಪತ್ರಕರ್ತರು ಸ್ನೇಹಮಯಿಗಳಾಗಿ ಕಾಣುತ್ತಿದ್ದರಿಂದ ನನಗೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಯಾವತ್ತು ಅನಿಸಲಿಲ್ಲ. ಪತ್ರಕರ್ತ ಮಿತ್ರರೊಂದಿಗೆ ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡುತ್ತಿದ್ದೇವು. ಇಂತಹ ಆರೋಗ್ಯಕರ ವಾತವರಣ ಮುಂದುವರಿಯಲಿ ಎಂದು ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಸೂರ್ಯನಾರಾಯಣ ಅವರು ಒಬ್ಬ ಮಾದರಿ ಪತ್ರಕರ್ತರಾಗಿ ಪ್ರತಿಯೊಬ್ಬರ ಪ್ರೀತಿ ವಿಶ್ವಾಸಗಳಿಸಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ಪತ್ರಕರ್ತರಾದ ಬನಶಂಕರ ಆರಾಧ್ಯ, ಎಸ್.ಎಂ.ನಂದೀಶ್, ಪಾಲಲೋಚನಾ ಆರಾಧ್ಯ, ಸಿದ್ದಲಿಂಗಸ್ವಾಮಿ, ಸಿ.ಮಹೇಂದ್ರ, ಅಮಚವಾಡಿ ರಾಜೇಂದ್ರ ಚಂದ್ರಶೇಖರ್, ಎಂ.ಲಿಂಗಪ್ಪ, ನಂಜುಂಡನಾಯಕ, ಎಂ. ಬಸವರಾಜು, ಪ್ರತಾಪ್, ಪ್ರಮೋದ, ರಾಜು ಹೊಸೂರು, ಅರಕಲವಾಡಿ ರವಿ, ಕಚೇರಿ ವ್ಯವಸ್ಥಾಪಕ ಸಿ.ಬಸವರಾಜು ಸೇರಿದಂತೆ ಇತರರಿದ್ದರು.