ಸುಶೀಲ್‌ಗೆ ಚೂರಿ ಇರಿತ ಪ್ರಕರಣ: ಮೂವರು ಆರೋಪಿಗಳ ಸೆರೆ

| Published : Feb 08 2024, 01:34 AM IST

ಸಾರಾಂಶ

ಶಿಕಾರಿಪುರ ಪಟ್ಟಣದ ದೊಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣದಲ್ಲಿನ ನಾಲ್ಕು ಆರೋಪಿಗಳಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಬಾಲಾಪರಾಧಿಯೂ ಸೇರ್ಪಡೆಗೊಂಡಿದ್ದಾನೆ. 3ನೇ ಆರೋಪಿ, ಬಾಲಾಪರಾಧಿ ಷಹನಾಜ್ ಎಂಬಾತನನ್ನೂ ಪ್ರಕರಣದಡಿ ಬಂಧಿಸಿ ಶಿವಮೊಗ್ಗದ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ. ಮಂಗಳವಾರ ರಾತ್ರಿ ಪಟ್ಟಣದಲ್ಲಿ ಮುಸ್ಲಿಂ ಯುವಕ ವ್ಹೀಲಿಂಗ್‌ನಲ್ಲಿ ತೊಡಗಿದ್ದ. ಈತನಿಗೆ ಹಿಂದೂ ಯುವಕ ಸುಶೀಲ್‌ ಎಂಬಾತ ಬುದ್ಧಿಮಾತು ಹೇಳಿದ್ದರಿಂದ ಕೆರಳಿ ಚೂರಿಯಿಂದ ಇರಿಯಲಾಗಿತ್ತು. ಇದರಿಂದಾಗಿ ಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಖಂಡಿಸಿ ಬುಧವಾರ ಬೆಳಗ್ಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಪಟ್ಟಣ ಠಾಣೆ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿ, ಕೂಡಲೇ ಆರೋಪಿಗಳ ಬಂಧನದ ಜತೆಗೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು.

ಶಿಕಾರಿಪುರ: ಪಟ್ಟಣದ ದೊಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣದಲ್ಲಿನ ನಾಲ್ಕು ಆರೋಪಿಗಳಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಬಾಲಾಪರಾಧಿಯೂ ಸೇರ್ಪಡೆಗೊಂಡಿದ್ದಾನೆ.

ಮಂಗಳವಾರ ರಾತ್ರಿ ಪಟ್ಟಣದಲ್ಲಿ ಮುಸ್ಲಿಂ ಯುವಕ ವ್ಹೀಲಿಂಗ್‌ನಲ್ಲಿ ತೊಡಗಿದ್ದ. ಈತನಿಗೆ ಹಿಂದೂ ಯುವಕ ಸುಶೀಲ್‌ ಎಂಬಾತ ಬುದ್ಧಿಮಾತು ಹೇಳಿದ್ದರಿಂದ ಕೆರಳಿ ಚೂರಿಯಿಂದ ಇರಿಯಲಾಗಿತ್ತು. ಇದರಿಂದಾಗಿ ಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಖಂಡಿಸಿ ಬುಧವಾರ ಬೆಳಗ್ಗೆ ಸಂಸದ ರಾಘವೇಂದ್ರ ನೇತೃತ್ವದಲ್ಲಿ ಪಟ್ಟಣ ಠಾಣೆ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿ, ಕೂಡಲೇ ಆರೋಪಿಗಳ ಬಂಧನದ ಜತೆಗೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಅವರು ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಪಟ್ಟಣದ ಮಾಸೂರು ಸರ್ಕಲ್ ನಿವಾಸಿ ಮುಬಾರಕ್ ಹಾಗೂ ಜೀಶನ್‌ರನ್ನು ಬಂಧಿಸಿದ್ದರು. ಇವರೊಂದಿಗೆ ಈಗ 3ನೇ ಆರೋಪಿ, ಬಾಲಾಪರಾಧಿ ಷಹನಾಜ್ ಎಂಬಾತನನ್ನೂ ಪ್ರಕರಣದಡಿ ಬಂಧಿಸಿ ಶಿವಮೊಗ್ಗದ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.

- - - -7ಕೆಎಸ್.ಕೆಪಿ3: ಜೀಶನ್