ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳ ಬಂಧನ

| Published : Sep 18 2025, 01:10 AM IST

ಸಾರಾಂಶ

ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ನಗ್ಮಾಬಾನು (25), ಮೊಹಮ್ಮದ್ ಇಂದಾದ್ (22) ಮೊಹಮ್ಮದ್ ಅಜ್ಜರ್ (30) ಮೊಯಿನುದ್ದೀನ್ (31) ಸೈಯದ್ ಇಕ್ಬಾಲ್ (28) ಬಂಧಿತ ಆರೋಪಿಗಳು.

ದಾಬಸ್‍ಪೇಟೆ:

ಇತ್ತೀಚೆಗೆಯಷ್ಟೇ ವ್ಯಕ್ತಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡ ಆರೋಪಿಗಳನ್ನು ಬಂಧಿಸುವಲ್ಲಿ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ನಗ್ಮಾಬಾನು (25), ಮೊಹಮ್ಮದ್ ಇಂದಾದ್ (22) ಮೊಹಮ್ಮದ್ ಅಜ್ಜರ್ (30) ಮೊಯಿನುದ್ದೀನ್ (31) ಸೈಯದ್ ಇಕ್ಬಾಲ್ (28) ಬಂಧಿತ ಆರೋಪಿಗಳು.ಘಟನಾ ಹಿನ್ನೆಲೆ : ಕಳೆದ ಸೆ. 8ರಂದು ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದ ಬಳಿ ಕುಣಿಗಲ್ ತಾಲೂಕು ಬೊಮ್ಮೇನಹಳ್ಳಿಪಾಳ್ಯದ ಮೊಹ್ಮದ್ ಕಲೀಂ ಉಲ್ಲಾಗೆ ನಾಲ್ಕೈದು ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕಲೀಂ ಉಲ್ಲಾ ಚಿಕಿತ್ಸೆ ಪಡೆದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪೋಟೋ 2 : ಹಲ್ಲೆ ಮಾಡಿದ ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿರುವುದು