ಸಾರಾಂಶ
ತಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮಾಜದ ವಿರುದ್ಧ ರಾಜ್ಯ ಸರ್ಕಾರ ಪೊಲೀಸರಿಂದ ಲಾಠಿ ಪ್ರಹಾರ ಮಾಡಿರುವುದು ಅಕ್ಷಮ್ಮ ಅಪರಾಧ
ಮುಳಗುಂದ: ಬೆಳಗಾವಿ ಸುವರ್ಣ ಸೌಧದ ಮುಂದೆ 2ಎ ಮೀಸಲಾತಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು ಖಂಡನೀಯ ಹಾಗೂ ಲಾಠಿ ಪ್ರಹಾರ ಮಾಡಿದ ಪೊಲೀಸರನ್ನು ಅಮಾನುಗೊಳಿಸುವಂತೆ ಒತ್ತಾಯಿಸಿ ಮುಳಗುಂದ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಪಪಂ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿ ಮನವಿ ಸಲ್ಲಿಸಲಾಯಿತು.
ಸ್ಥಳೀಯ ಘಟಕದ ಅಧ್ಯಕ್ಷ ಮಹಾಂತೇಶ ಬಾತಾಖಾನಿ ಮಾತನಾಡಿ, ತಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮಾಜದ ವಿರುದ್ಧ ರಾಜ್ಯ ಸರ್ಕಾರ ಪೊಲೀಸರಿಂದ ಲಾಠಿ ಪ್ರಹಾರ ಮಾಡಿರುವುದು ಅಕ್ಷಮ್ಮ ಅಪರಾಧ. ಸಂವಿಧಾನವು ಹೋರಾಟ ಮಾಡಲು ಹಕ್ಕು ನೀಡಿದೆ. ಸಂವಿಧಾನ ಬದ್ಧ ಹೋರಾಟ ಹತ್ತಿಕ್ಕಲು ಪಂಚಮಸಾಲಿಗಳ ಧ್ವನಿ ಅಡಗಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹೋರಾಟದಲ್ಲಿ ಪಾಲ್ಗೊಂಡ ಪಂಚಮಸಾಲಿ ಮುಖಂಡರಿಗೆ ರಕ್ತ ಬರುವಂತೆ ಪೊಲೀಸರು ಹಲ್ಲೆ ಮಾಡಿರುವುದು ಅಕ್ಷಮ್ಯ. ಸರ್ಕಾರ ಬೇಷರತ್ತಾಗಿ ಪಂಚಮಸಾಲಿ ಸಮಾಜದ ಕ್ಷಮೆ ಕೇಳಬೇಕು. ಮುಖ್ಯಮಂತ್ರಿಗಳು ಕೂಡಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಸಿ.ಎಸ್. ಪತ್ರಿ, ಎಂ.ಪಿ. ಮಜ್ಜಿಗುಡ್ಡ, ಎಂ.ಎಸ್. ಬಳ್ಳಾರಿ, ಎಂ.ಡಿ. ನರಗುಂದ, ಸಿದ್ರಾಮಯ್ಯ ಹಿರೇಮಠ, ಎ.ಎನ್. ಬಾತಾಖಾನಿ, ಕೆ.ಎ. ಬಾತಾಖಾನಿ, ಎಂ.ವೈ. ಕುಂಬಾರ, ಲಕ್ಷ್ಮಣ ಇಂಗಳಹಳ್ಳಿ, ಮೋಹನ ಮದ್ದಿನ, ಮಲ್ಲಕಾಜಪ್ಪ ಉಜ್ಜಣ್ಣವರ, ಬಿ.ಟಿ. ಕಾಳೆ, ಟಿ.ಎಂ. ಕಾಳೆ, ತಿಪ್ಪಣ್ಣ ಬಂಡಿ, ವೀರೇಶ ಅಕ್ಕಿ, ಸಿದ್ದು ಅಕ್ಕಿ, ಶರಣಪ್ಪ ಬಂಗಾರಿ ಸೇರಿದಂತೆ ಇತರರು ಇದ್ದರು.