ಸಾರಾಂಶ
ಆದೇಶ ಪಾಲನೆ ಮಾಡದಿದ್ದರೆ ಅಮಾನತು ಮಾಡಿಸುವೆ
ಕನ್ನಡಪ್ರಭ ವಾರ್ತೆ ಗುಬ್ಬಿ
ಜೆಜೆಎಂ ಕಾಮಗಾರಿ ಮಾಡುವ ಸಿಸಿ ರಸ್ತೆಯನ್ನು ಹಾಳು ಮಾಡಿದ್ದು, ಅದನ್ನು ಸರಿ ಪಡಿಸಿದ ನಂತರವೇ ಗ್ರಾಪಂ ಸುಪರ್ದಿಗೆ ತೆಗೆದುಕೊಳ್ಳಬೇಕು. ಒಂದು ವೇಳೆ ನಾನು ನೀಡುವ ಆದೇಶ ಪಾಲನೆ ಮಾಡದೆ ಸುಪರ್ದಿಗೆ ತೆಗೆದುಕೊಂಡರೆ ಪಿಡಿಒಗಳನ್ನು ಅಮಾನತು ಮಾಡಿಸುವುದಾಗಿ ಗುಬ್ಬಿ ಶಾಸಕ ಶ್ರೀನಿವಾಸ್ ಎಚ್ಚರಿಕೆ ನೀಡಿದರು.ತಾಲೂಕಿನ ನಿಟ್ಟೂರು ಮರಿಯಮ್ಮ ದೇವಿ ಆವರಣದಲ್ಲಿ ಗ್ರಾಮೀಣ ಕುಡಿಯಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ನಿಟ್ಟೂರು ಗ್ರಾಮದಲ್ಲಿ ಅಂದಾಜು ರು. 2.80 ಕೋಟಿ ವೆಚ್ಚದ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿಪೂಜೆ ಮಾಡಿ ಮಾತನಾಡಿದ ಅವರು, ಮನೆ ಮನೆಗೆ ನಳ ಯೋಜನೆಯಲ್ಲಿ ಕಾಮಗಾರಿ ಮಾಡುವಾಗ ಸಿಸಿ ರಸ್ತೆಯನ್ನು ಕಟ್ ಮಾಡಿದ್ದಾರೆ. ಗುತ್ತಿಗೆದಾರರು ಅದಕ್ಕೆ ಸಿಮೆಂಟ್ ಹಾಕಿ ಸರಿ ಮಾಡಿದಾಗ ಮಾತ್ರ ಗ್ರಾಮ ಪಂಚಾಯತಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಕಾಮಗಾರಿ ಪೂರ್ಣಗೊಳ್ಳದೆ ಪಂಚಾಯಿತಿ ಸುಪರ್ದಿಗೆ ಪಡೆದುಕೊಂಡರೆ ಅಂತಹ ಪಿಡಿಒ ರವರನ್ನು ಅಮಾನತು ಮಾಡಿಸಲಾಗುತ್ತದೆ. ಕಾರಣ ಸಾಕಷ್ಟು ಶ್ರಮ ಹಾಕಿ ಅನುದಾನ ತಂದು ರಸ್ತೆಗಳನ್ನ ಮಾಡಲಾಗುತ್ತದೆ. ಈಗ ಗುತ್ತಿಗೆದಾರರು ಆ ರಸ್ತೆಯನ್ನು ಹಾಳು ಮಾಡಿ ಹೋದರೆ ಮುಂದೆ ಅನುದಾನ ಎಲ್ಲಿಂದ ತರುವುದು ಎಂದರು.
ಇನ್ನೂ ತಾಲೂಕಿನ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿ.ಹೊಸಹಳ್ಳಿ ಕ್ರಾಸ್ ಹತ್ತಿರ ಜವಳಿ ಇಲಾಖೆಗೆ 20 ಎಕರೆ ಸ್ಥಳ ನೀಡಿದ್ದು, ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಗುಡಿ ಕೈಗಾರಿಕೆಗೆ, ಸ್ವಯಂ ಉದ್ಯೋಗ ಹೆಚ್ಚಿಸಿಕೊಳ್ಳಲು ನಿಟ್ಟಿನಲ್ಲಿ ಹಾಗೂ ಮಹಿಳೆಯರಿಗೆ ಗಾರ್ಮೇಂಟ್ ನಿರ್ಮಿಸಿ ಗ್ರಾಮೀಣ ಮಟ್ಟದ ಮಹಿಳೆಯರ ಜೀವನ ಮಟ್ಟವನ್ನು ಉತ್ತಮ ಪಡಿಸುವಲ್ಲಿ ಯೋಜನೆ ರೂಪಿಸಲಾಗಿದೆ ಎಂದರು. ಕಿಬ್ಬಳ್ಳಿಕ್ರಾಸ್ ನಲ್ಲಿ ಆಸ್ಪತ್ರೆ ಮಾಡುವ ಯೋಜನೆಯ 10 ವರ್ಷ ಹಿಂದೆಯೇ ಎಲ್ಲಾ ಶಾಸಕರು ಅನುಮೋದನೆ ಮಾಡಿದರು. ಬದಲಾಗಿ ಈಗ 300 ಕೋಟಿಗೂ ಹೆಚ್ಚು ವೆಚ್ಚದಲ್ಲಿ ತುಮಕೂರು ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಎಲ್ಲಾ ಶಾಸಕರು ಒಪ್ಪಿರುವುದರಿಂದ ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಉಮೇಶ್, ಅಧ್ಯಕ್ಷೆ ಮಂಗಳಗೌರಮ್ಮ, ಸದಸ್ಯರಾದ ತಿಮ್ಮಪ್ಪಸ್ವಾಮಿ, ಪುರುಷೋತ್ತಮ, ನರಸಯ್ಯ, ಸಂತೋಷ್, ಗಿರೀಶ್, ಗುತ್ತಿಗೆದಾ ಸುವಾಸ್, ಮುಖಂಡರು, ಸಾರ್ವಜನಿಕರು ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))