ಸಾರಾಂಶ
ಭಾಲ್ಕಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ್ ಅವರು ಮಕ್ಕಳಿಗೆ ನೋಟ್‌ಬುಕ್ ವಿತರಿಸಿದರು. ಜೊತೆಗೆ ಶಿಕ್ಷಕ ಪ್ರಭು ಡಿಗ್ಗೆ ಇದ್ದರು
ಕನ್ನಡಪ್ರಭ ವಾರ್ತೆ ಭಾಲ್ಕಿ
ವಿದ್ಯಾರ್ಥಿಗಳು ನಿಂತ ನೀರಾಗದೇ ಹರಿಯುವ ನದಿಯಾಗಬೇಕು. ಜ್ಞಾನದ ಹಸಿವನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಓದುವಿಕೆ ಮೈಗೂಡಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ್ ಹೇಳಿದರು.ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿದಾಗ ಮುಂದೆ ಉತ್ತಮ ಭವಿಷ್ಯವನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯೆಗೆ ಅಂತ್ಯ ಎಂಬುದಿಲ್ಲ. ಅದು ನಿರಂತರ ಪ್ರಕ್ರಿಯೆ. ನಾವು ಅದರಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಉತ್ತಮ ವಿಷಯ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಸುಲ್ತಾನಾ ಬೇಗಂ, ಶಿಕ್ಷಕರಾದ ಪ್ರಭು ಡಿಗ್ಗೆ, ಆಶಿಯಾ ಬೇಗಂ, ಮಂಗಲಾ ನಾಟೇಕರ್, ಬಿಸಿಯೂಟದ ಸಿಬ್ಬಂದಿಗಳಾದ ವರ್ಷಾ, ಜೈನಬೀ ಸೇರಿದಂತೆ ಹಲವರು ಇದ್ದರು.ಇದೇ ವೇಳೆ ಜೂ.30ರಂದು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ್ ಅವರನ್ನು ಶಿಕ್ಷಕ ಪ್ರಭು ಡಿಗ್ಗೆ ಸನ್ಮಾನಿಸಿದರು.