ಹೊಸಕೋಟೆ: ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ನಡೆಯಲಿರುವ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಸ್ವಾಗತಿಸಿದರು.

ಹೊಸಕೋಟೆ: ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ನಡೆಯಲಿರುವ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಸ್ವಾಗತಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀ ಆದಿಜಗದ್ಗುರು ಶಿವರಾತ್ರೇಶ್ವರ ಶಿವಯೋಗಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಯಿತು.

2026ನೇ ಜನವರಿ 15ರಿಂದ 20ರವರೆಗೆ ಮೈಸೂರಿನ ಶ್ರೀ ಕ್ಷೇತ್ರ ಸುತ್ತೂರು ಮಠದಲ್ಲಿ ಜ.15ರಂದು ಉತ್ಸವ ಮೂರ್ತಿಯನ್ನು ಗದ್ದುಗೆಗೆ ಬಿಜಯಂಗೈಸುವುದು, 16ರಂದು ಹಾಲ್ವಾರಿ ಉತ್ಸವ, ಶ್ರೀ ಸೋಮೇಶ್ವರಸ್ವಾಮಿ ಕುಂಭಾಭಿಷೇಕ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವ, ಸಾಮೂಹಿಕ ವಿವಾಹ, 17ರಂದು ರಥೋತ್ಸವ, 18ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ, ಶ್ರೀ ಮಹದೇಶ್ವರ ಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, 19ರಂದು ತೆಪ್ಪೋತ್ಸವ ಹಾಗೂ ಕೊನೆ ದಿನ 20ರಂದು ಅನ್ನಬ್ರಹ್ಮೋತ್ಸವ ಹಾಗೂ ಉತ್ಸವ ಮೂರ್ತಿ ಶ್ರೀ ಗದ್ದುಗೆ ಬಿಜಯಂಗೈಸುವ ಕಾರ್ಯಕ್ರಮಗಳಿರುತ್ತದೆ.

ಈ ಸಂದರ್ಭದಲ್ಲಿ ನಗರ ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪರಮೇಶ್, ಅರ್ಚಕರ ಸಂಘದ ಅಧ್ಯಕ್ಷ ನಟರಾಜ್ ಶಾಸ್ತ್ರಿ, ತಾಲೂಕು ವೀರಶೈವ ಮಹಾಸಭದ ಉಪಾಧ್ಯಕ್ಷ ಮಧು, ಕಾರ್ಯದರ್ಶಿ ಕುಮಾರ್, ಮುಖಂಡರಾದ ಮಂಜುನಾಥ್, ಕಾರ್ತೀಕ್, ಓರೊಹಳ್ಳಿ ಬಸವರಾಜ್, ಮೂರ್ತಿ, ಬಸವರಾಜಣ್ಣ, ನಾಗೇಶ್, ಪ್ರವೀಣ್ ಹಳ್ಳಿ ಗೌಡ, ತಾಲೂಕಿನ ವೀರಶೈವ ಲಿಂಗಾಯತ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

ಫೋಟೋ: 27 ಹೆಚ್‌ಎಸ್‌ಕೆ 4

ಹೊಸಕೋಟೆಯ ಬಸವೇಶ್ವರ ವೃತ್ತದಲ್ಲಿ ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ವೀರಶೈವ ಲಿಂಗಾಯತ ಮುಖಂಡರು ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿದರು. ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪರಮೇಶ್, ಅರ್ಚಕರ ಸಂಘದ ಅಧ್ಯಕ್ಷ ನಟರಾಜ್ ಶಾಸ್ತ್ರಿ ಇತರರಿದ್ದರು.