ದೆಹಲಿ ಕರ್ನಾಟಕ ಭವನ ಕಾಮಗಾರಿ ನಿರ್ವಹಿಸಿದ ಸುಯಜ್‌ ಕುಮಾರ್‌ ಶೆಟ್ಟಿ ಸನ್ಮಾನ

| Published : Apr 07 2025, 12:33 AM IST

ದೆಹಲಿ ಕರ್ನಾಟಕ ಭವನ ಕಾಮಗಾರಿ ನಿರ್ವಹಿಸಿದ ಸುಯಜ್‌ ಕುಮಾರ್‌ ಶೆಟ್ಟಿ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯಲ್ಲಿ ರಾಜ್ಯ ಸರ್ಕಾರ ನಿರ್ಮಿಸಿರುವ ಕರ್ನಾಟಕ ಭವನ -1 (ಕಾವೇರಿ) ಲೋಕಾರ್ಪಣೆ ಸಂದರ್ಭದಲ್ಲಿ, ಈ ಕಾಮಗಾರಿ ನಡೆಸಿಕೊಟ್ಟ ಕಾರ್ಕಳದ ಎಸ್. ಕೆ. ಎಸ್. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ದೆಹಲಿಯಲ್ಲಿ ರಾಜ್ಯ ಸರ್ಕಾರ ನಿರ್ಮಿಸಿರುವ ಕರ್ನಾಟಕ ಭವನ -1 (ಕಾವೇರಿ) ಲೋಕಾರ್ಪಣೆ ಸಂದರ್ಭದಲ್ಲಿ, ಈ ಕಾಮಗಾರಿ ನಡೆಸಿಕೊಟ್ಟ ಕಾರ್ಕಳದ ಎಸ್. ಕೆ. ಎಸ್. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

ಈ ಸಂದರ್ಭ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ, ನವದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಂದ್ರ ಮತ್ತು ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಮತ್ತು ಸುಧಾ ನಾರಾಯಣಮೂರ್ತಿ, ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮತ್ತಿತರರು ಇದ್ದರು. ಹೀಗಿದೆ ಕರ್ನಾಟಕ ಭವನ:

ದೆಹಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯ 12,212 ಚದರ ಮೀಟರ್‌ ಪೈಕಿ 3,532 ಚದರ ಮೀಟರ್‌ನಲ್ಲಿ ತಲೆ ಎತ್ತಿರುವ 9 ಅಂತಸ್ತಿನ ಕಟ್ಟಡವು ಸುಮಾರು 138 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿವೆ. 2 ವಿವಿಐಪಿ ಸೂಟ್‌, 32 ಸಾಧಾರಣ ಸೂಟ್‌ ರೂಮ್‌, 19 ಸಿಂಗಲ್‌ ರೂಮ್‌, 86 ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳೂ ಇವೆ. ಜತೆಗೆ ವಾಹನ ನಿಲುಗಡೆಗೂ ಅಚ್ಚುಕಟ್ಟಾದ ವ್ಯವಸ್ಥೆ ಇದೆ.