ದೀರ್ಘಕಾಲ ಸ್ತನ್ಯಪಾನ ಮಾಡಿಸಲು ತಾಯಿಯಂದಿರಿಗೆ ಸಲಹೆ

| Published : Aug 07 2025, 12:45 AM IST

ದೀರ್ಘಕಾಲ ಸ್ತನ್ಯಪಾನ ಮಾಡಿಸಲು ತಾಯಿಯಂದಿರಿಗೆ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ತನ್ಯಪಾನ ಮಾಡಿಸುವ ತಾಯಿಯಂದಿರು ತಾವೂ ಕೂಡ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರುತಾಯಿಯಂದಿರು ದೀರ್ಘಕಾಲ ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸದೃಢರಾಗುವುದರಿಂದ ತಾಯಿಯಂದಿರು ಕನಿಷ್ಠ ಒಂದು ವರ್ಷಗಳ ಕಾಲವಾದರೂ ಮಕ್ಕಳಿಗೆ ಸ್ತನ್ಯಪಾನ ಮಾಡಿಸಬೇಕೆಂದು ಹಿರಿಯ ವಕೀಲೆ ಮಂಜುಳಾ ಮಾನಸ ಕರೆನೀಡಿದರು.ನಗರದ ಸುಯೋಗ್ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೋ ತಾಯಿಯಂದಿರು ಸ್ತನ್ಯಪಾನ ಮಾಡಿಸುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಭ್ರಮೆಯಿಂದ ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದನ್ನು ನಿಲ್ಲಿಸಿ ಅದಕ್ಕೆ ಪರ್ಯಾಯವಾಗಿ ಶೀಶೆ ಹಾಲನ್ನು ಅಭ್ಯಾಸ ಮಾಡಿಸುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತಿದ್ದು ಇದರಿಂದಾಗಿ ಅಪೌಷ್ಟಿಕಾಂಶವುಳ್ಳ ಮಕ್ಕಳು ಜನಿಸುತ್ತಾರೆ. ಆದ್ದರಿಂದ ಆ ಭ್ರಮೆಯಿಂದ ಹೊರಬರಬೇಕು ಎಂದು ಅವರು ತಿಳಿ ಹೇಳಿದರು.ಸ್ತನ್ಯಪಾನದ ಬಗ್ಗೆ ಉಪನ್ಯಾಸ ನೀಡಿದ ಪ್ರಸೂತಿ ತಜ್ಞೆ ಡಾ. ಅನುಷಾ ಮಾತನಾಡಿ, ಸ್ತನ್ಯಪಾನ ಮಾಡಿಸುವ ತಾಯಿಯಂದಿರು ತಾವೂ ಕೂಡ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.ತಾಯಿಯ ಹಾಲಿನಲ್ಲಿ ಇರುವ ರೋಗ ನಿರೋಧಕ ಶಕ್ತಿ ಹಾಗೂ ಮಕ್ಕಳಲ್ಲಿ ಸುಲಭವಾಗಿ ಜೀರ್ಣವಾಗುವ ಅಂಶಗಳು ಸಹಜವಾಗಿ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ನೆರವು ನೀಡುವುದಾಗಿ ತಿಳಿಸಿದರು. ಸ್ತನ್ಯಪಾನ ಸಪ್ತಾಹದ ಅಂಗವಾಗಿ ವಾರವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪೌಷ್ಟಿಕಾಂಶವುಳ್ಳ ಆಹಾರ ತಯಾರಿಕೆಯ ಸ್ಪರ್ಧೆಗಳನ್ನೂ ಕೂಡ ಏರ್ಪಡಿಸಲಾಗಿತ್ತು. ಸುಯೋಗ್ ಆಸ್ಪತ್ರೆಯಲ್ಲಿ ಸಹಜ ಹೆರಿಗೆಯಾಗಿ ಅತ್ಯುತ್ತಮ ರೀತಿಯಲ್ಲಿ ಸ್ತನಪಾನ ಮಾಡಿಸಿ ಆರೋಗ್ಯವಂತ ಮಗುವಿನ ಸ್ಪರ್ಧೆಯಲ್ಲಿ ವಿಜೇತರಾದ ಮೇಘನಾ ವಿನೋದ್ ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಸುಯೋಗ್ ಆಸ್ಪತ್ರೆಯಲ್ಲಿ ದೊರಕುತ್ತಿರುವ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಟ್ರಸ್ಟಿ ಸುಧಾ ಯೋಗಣ್ಣ, ವ್ಯವಸ್ಥಾಪಕ ನಿರ್ದೇಶಕ ಡಾ. ಸುಯೋಗ್ ಯೋಗಣ್ಣ, ನಿರ್ದೇಶಕ ಡಾ. ಯಶಿತ ರಾಜ್, ಪ್ರಸೂತಿ ಮತ್ತು ಸ್ತ್ರೀ ಸಂತಾನಾಂಗ ತಜ್ಞ ಡಾ. ಗೀತಾ, ನರ್ಸಿಂಗ್ ಸೂಪರಿಂಟೆಂಡೆಂಟ್ ಪ್ರೇಮಲತಾ, ಗಾಯತ್ರಿ ನಾರಾಯಣಗೌಡ ಮೊದಲಾದವರು ಇದ್ದರು.