ಸಾರಾಂಶ
ದೊಡ್ಡಪುಲಿಕೋಟು ಗ್ರಾಮ ಹಿತ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಗ್ರಾಮದ ತಂಡ್ರಹೊಳೆ ಸೇತುವೆಯಿಂದ ಪ್ರಾರಂಭಿಸಿ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿರುವಂತಹ ಕಸ ಕಡ್ಡಿಗಳು, ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ದೊಡ್ಡಪುಲಿಕೋಟು ಗ್ರಾಮ ಹಿತ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಗ್ರಾಮದ ತಂಡ್ರಹೊಳೆ ಸೇತುವೆಯಿಂದ ಪ್ರಾರಂಭಿಸಿ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲಿರುವಂತಹ ಕಸ ಕಡ್ಡಿಗಳು, ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.ದೊಡ್ಡಪುಲಿಕೋಟು ಗ್ರಾಮ ಹಿತ ರಕ್ಷಣಾ ಸಮಿತಿಯ ಸಂಚಾಲಕರು ಕರವಂಡ ಲವ ನಾಣಯ್ಯ ಮಾತನಾಡಿ, ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣದ ವಿರುದ್ಧ ಗ್ರಾಮ ಹಿತ ರಕ್ಷಣಾ ಸಮಿತಿ ಹೋರಾಟ ನಡೆಸಿ ರೆಸಾರ್ಟ್ ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ಗ್ರಾಮದ ಅಭಿವೃದ್ಧಿಯತ್ತಲೂ ಹಿತರಕ್ಷಣಾ ಸಮಿತಿ ಗಮನಹರಿಸುತ್ತಿದೆ. ಗ್ರಾಮದ ನೆಲ, ಜಲ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಪಂಚಾಯಿತಿ ಸದಸ್ಯ ಮುಕ್ಕಾಟಿರ ಸುತನ್ ಸುಬ್ಬಯ್ಯ, ಕರವಂಡ ಅಪ್ಪಣ್ಣ, ಮುಕ್ಕಾಟಿರ ಯತೀಶ್, ಅಪ್ಪಚ್ಚಿರ ತಂಡ್ರಿ ತಮ್ಮಯ್ಯ, ಕರವಂಡ ರವಿ ಬೋಪಣ್ಣ, ಮುಕ್ಕಾಟಿರ ಬಿನ್ನು ಮೋಹನ್, ಮುಕ್ಕಾಟಿರ ಬೋಪಣ್ಣ, ಕರವಂಡ ಮನು ಮಾಚಯ್ಯ, ಕರವಂಡ ಸದ ಸುಬ್ಬಯ್ಯ, ಮಣವಟಿರ ಹರೀಶ್ ಅಯ್ಯಪ್ಪ, ಅಪ್ಪಚ್ಚಿರ ದಿನು ತಮ್ಮಯ್ಯ, ಕರವಂಡ ಬೆಲ್ಲು ಬೆಳ್ಳಿಯಪ್ಪ, ಮುಕ್ಕಾಟಿರ ಸತ್ಯ ಸುಬ್ಬಯ್ಯ, ಮುಕ್ಕಾಟಿರ ಪೊನ್ನಣ್ಣ, ಮುಕ್ಕಾಟಿರ ಸಂಪತ್, ಮುಕ್ಕಾಟಿರ ಬೆಲ್ಲು ಪೂಣಚ್ಚ, ಮಕ್ಕಾಟಿರ ಜಾಲಿ ಚಿಂಗಪ್ಪ, ಕರವಂಡ ಸತೀಶ್ ಸುಬ್ಬಯ್ಯ, ಕೋಟೆರ ಎಂ. ಕಿಶೋರ್, ಕೋಟೆರ ಯು. ಶಿವಪ್ರಸಾದ್, ಪೆಬ್ಬಟ್ಟಿರ ಶೀತಲ್ ಕಾರ್ಯಪ್ಪ, ಮಣವಟಿರ ರೆಮ್ಮಿ ಮುದ್ದಪ್ಪ, ಕರವಂಡ ಭವ್ಯ ಸೋಮಯ್ಯ, ಪೆಬ್ಬಟ್ಟಿರ ಗೀತಾ ಕಾರ್ತಿಕ್, ಗ್ರಾಮ ಹಿತ ರಕ್ಷಣಾ ಸಮಿತಿಯ ಸದಸ್ಯರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.