ವಿಶ್ವಕರ್ಮ ಬ್ಯಾಂಕ್‌ನಿಂದ ಸ್ವಚ್ಛ ಭಾರತ್‌ ಕಾರ್ಯಕ್ರಮ

| Published : Oct 28 2025, 12:42 AM IST

ವಿಶ್ವಕರ್ಮ ಬ್ಯಾಂಕ್‌ನಿಂದ ಸ್ವಚ್ಛ ಭಾರತ್‌ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್‌ ಶಾಖೆ ವತಿಯಿಂದ ‘ಸ್ವಚ್ಛತಾ ಹೀ ಸೇವಾ’ ಧ್ಯೇಯದೊಂದಿಗೆ ಸ್ವಚ್ಛ ಭಾರತ್ ಕಾರ್ಯಕ್ರಮ ನೆರವೇರಿತು.

ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಸುವರ್ಣ ಸಂಭ್ರಮದ ಸಂದರ್ಭ ನೂರಾರು ಕೋಟಿ ರು. ವ್ಯವಹಾರ ಮಾಡುವುದರೊಂದಿಗೆ ಸಮಾಜಕ್ಕಾಗಿ ನಿರಂತರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಜಾರ್ ಬೀಡಿ ಮಾಲೀಕ ಸುಧಾಕರ್ ಆಚಾರ್ಯ ಹೇಳಿದರು.ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್‌ ಶಾಖೆ ವತಿಯಿಂದ ‘ಸ್ವಚ್ಛತಾ ಹೀ ಸೇವಾ’ ಧ್ಯೇಯದೊಂದಿಗೆ ಸ್ವಚ್ಛ ಭಾರತ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.ಬ್ಯಾಂಕಿಂಗ್ ಸೇವೆಯೊಂದಿಗೆ ಸಮಾಜಿಕ ಸೇವೆಯನ್ನು ಮಾಡುತ್ತಿರುವುದು ಅದರಲ್ಲಿಯೂ ಮೆಲ್ಕಾರ್‌ನಂತಹ ಸಾಮಾನ್ಯ ಪರಿಸರದಲ್ಲಿ ನಿರಂತರ ಮುಂದಿನ 10 ತಿಂಗಳ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನಾಗರಿಕರಿಗೆ ತುಂಬಾ ಸಂತಸವನ್ನು ಮೂಡಿಸಿದೆ ಎಂದರು.

ಯುವ ಸಂಗಮ ಮೆಲ್ಕಾರ್ ಅಧ್ಯಕ್ಷ ಎಂ.ಎನ್. ಕುಮಾರ್ ಮಾತನಾಡಿ, ಸ್ವಚ್ಛ ಭಾರತ ಕಾರ್ಯಕ್ರಮ ಮನೆಯಿಂದ ಪ್ರಾರಂಭವಾಗಬೇಕು, ಮುಂದಿನ ಪೀಳಿಗೆಗೂ ಸ್ವಚ್ಛತೆಯ ಅರಿವನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಬ್ಯಾಂಕ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು.

ಬ್ಯಾಂಕಿನ ನಿರ್ದೇಶಕರಾದ ಬಿಜು ಜಯ, ಜಯಪ್ರಕಾಶ್ ಭಂಡಾರಿಬೆಟ್ಟು, ಪ್ರಕಾಶ್ ಆಚಾರ್ಯ ತುಂಬೆ, ನರಿಕೊಂಬು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂತೋಷ್ ಮತ್ತು ಸದಸ್ಯರು, ಬಂಟ್ವಾಳ ಪುರಸಭೆಯ ಮಾಜಿ ಸದಸ್ಯೆ ವಸಂತಿ ಗಂಗಾಧರ್, ಯುವ ಸಂಗಮ ಮೆಲ್ಕಾರ್ ಅಧ್ಯಕ್ಷ ಪೂರ್ಣೇಶ್, ಶ್ರೀಸತ್ಯ ದೇವತೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಗಾಣಿಗ ಹಾಗೂ ಸದಸ್ಯರು, ನವ ಜೀವನ ಗೇಮ್ಸ್ ಕ್ಲಬ್ ಅಧ್ಯಕ್ಷ ಧನಂಜಯ ಮತ್ತು ಸದಸ್ಯರು, ನರಿಕೊಂಬು ಯುವಕ ಮಂಡಲದ ಅಧ್ಯಕ್ಷ ಕೃಷ್ಣ ಹಾಗೂ ಉಪಾಧ್ಯಕ್ಷ ಭಾಸ್ಕರ್ ಕುಲಾಲ್, ಮಹಿಳಾ ಪ್ರೇರಣ ಸಂಘ, ವಿನಾಯಕ ಫ್ರೆಂಡ್ಸ್ ವಿದ್ಯಾನಗರ ನರಿಕೊಂಬು, ವಿನಾಯಕ ಫ್ರೆಂಡ್ಸ್, ವಿದ್ಯಾನಗರ, ಬ್ಯಾಂಕಿನ ವ್ಯವಸ್ಥಾಪಕಿ ಉಷಾ ಕೆ. ಹಾಗೂ ಸಿಬ್ಬಂದಿ ಇದ್ದರು.