ಕಾಲೇಜಿನ ಪ್ರಾಂಶುಪಾಲ ಡಾ. ಕಾರ್ತಿಕೇಯನ್
ಕನ್ನಡಪ್ರಭ ವಾರ್ತೆ, ತರೀಕೆರೆಈ ಬಾರಿ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಸತತ 2ನೇ ಬಾರಿಗೆ ಶೇ.100 ಫಲಿತಾಂಶ ಬಂದಿದ್ದು ಹೆಮ್ಮೆಯ ವಿಷಯವಾಗಿದೆ.
ಒಟ್ಟು ಈ ಬಾರಿ 51 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 20 ವಿದ್ಯಾರ್ಥಿಗಳು ಅತ್ಯುನ್ನತ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ ಮತ್ತು 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಕಾರ್ತಿಕೇಯನ್ ತಿಳಿಸಿದ್ದಾರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಕೀನ ಕೌಸರ್ ಒಟ್ಟು 600 ಅಂಕಗಳಿಗೆ 576 ಅಂಕದೊಂದಿಗೆ ಶೇ. 96 ಫಲಿತಾಂಶ ಪಡೆದು ಕಾಲೇಜಿಗೆ ಟಾಪರ್ ಆಗಿದ್ದು ಹಿಂದಿ 99 ಇಂಗ್ಲೀಷ್ 92, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 96 ಗಣಿತ 100 ಜೀವಶಾಸ್ತ್ರ 90 ಅಂಕ ಪಡೆದಿರುತ್ತಾರೆ.ಸಿಂಚನ ಟಿ ವಿ ಒಟ್ಟು 575 ಅಂಕದೊಂದಿಗೆ ಶೇ 95,82 ಫಲಿತಾಂಶ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ, ಕನ್ನಡ 99, ಇಂಗ್ಲೀಷ್ 90, ಭೌತಶಾಸ್ತ್ರ 96, ರಸಾಯನ ಶಾಸ್ತ್ರ 93. ಗಣಿತ 99 ಜೀವಶಾಸ್ತ್ರ 95 ಅಂಕ ಪಡೆದಿರುತ್ತಾರೆ. ಫಾತೀಮಾ ರಿದಾ ಒಟ್ಟು 573 ಅಂಕದೊಂದಿಗೆ ಶೇ 95.50 ಫಲಿತಾಂಶ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದು ಹಿಂದಿ 96, ಇಂಗ್ಲೀಷ್ 93 ಭೌತಶಾಸ್ತ್ರ 94, ರಸಾಯನ ಶಾಸ್ತ್ರ 92, ಗಣಿತ 99, ಜೀವಶಾಸ್ತ್ರ 99 ಅಂಕ ಪಡೆದಿರುತ್ತಾರೆ.
ಉತ್ತಮ ಫಲಿತಾಂಶ ಗಳಿಸಲು ಕಾರಣರಾದ ಕಾಲೇಜಿನ ಉಪನ್ಯಾಸಕರಿಗೆ, ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಟಿ. ಜಿ. ಶಶಾಂಕ್, ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಹಾಗೂ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಡಾ. ಕಾರ್ತಿಕೇಯನ್ ಅಭಿನಂದಿಸಿದ್ದಾರೆ. -
16ಕೆಟಿಆರ್.ಕೆ.2ಃ ಸಕೀನ ಕೌಸರ್16ಕೆಟಿಆರ್.ಕೆ.3ಃ ಸಿಂಚನ ಟಿ ವಿ16ಕೆಟಿಆರ್.ಕೆ.3ಃ ಫಾತೀಮಾ ರಿದಾ