. ದೇಶಕ್ಕೆ ಹಾಗೂ ಯುವಸಮೂಹಕ್ಕೆ ವಿವೇಕಾನಂದರು ಇಂದಿಗೂ ಪ್ರೇರಣೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರು ಶಿಕ್ಷಣ, ಸಂಘಟನೆ, ಯುವಕರ ಶಕ್ತಿಯಿಂದ ದೇಶವನ್ನೇ ಬದಲಿಸಬಹುದು ಎಂಬುದನ್ನು ತೋರಿಸಿಕೊಟ್ಟವರು. ಅವರ ಮಾತು ಇಂದಿಗೂ ಸತ್ಯವಾಗಿದೆ. ದೇಶಕ್ಕೆ ಹಾಗೂ ಯುವಸಮೂಹಕ್ಕೆ ವಿವೇಕಾನಂದರು ಇಂದಿಗೂ ಪ್ರೇರಣೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಇಲ್ಲಿನ ಉಣಕಲ್ಲ ಕೆರೆಯಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸ್ವಾಮಿ ವಿವೇಕಾನಂದರ ಜಯಂತಿಯನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಅವರು ಬ್ರಿಟಿಷರ ಕಾಲದಲ್ಲಿಯೇ ವಿದೇಶಾಂಗ ‌ನೀತಿಗೆ ಶಕ್ತಿ ತುಂಬಿದವರು. ಭಾರತ ಹಾವಾಡಿಗರ, ಬಡವರ, ಬಿಕ್ಷುಕರ ದೇಶ ಎಂದು ಹೀಯಾಳಿಸುತ್ತಿದ್ದ ಕಾಲದಲ್ಲಿ ಭಾರತದ ಅಂತರ್ ಶಕ್ತಿ ಏನು ಎಂಬುದನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟವರು ಎಂದರು.

ಶ್ರೀ ರಾಮಕೃಷ್ಣ‌ ಪರಮಹಂಸರ ಶಿಷ್ಯರಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ವಿದ್ವತ್ತನ್ನು ಪಡೆದು ಅಧ್ಯಯನ ಮಾಡಿ ಕಡಿಮೆ ಅವಧಿಯ ಜೀವಿತಾವಧಿಯಲ್ಲಿ ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು. ಅವರ ಸಂದೇಶ ನಮಗೆ ಹಾಗೂ ಮುಂಬರುವ ಪೀಳಿಗೆಗೆ ಪ್ರೇರಣೆಯಾಗಿದೆ. ಬಿಜೆಪಿಯಿಂದ ದೇಶಾದ್ಯಂತ ಯವಶಕ್ತಿಯ ಪ್ರೇರಣೆಯಾಗಿ‌ ಅವರ ಜಯಂತಿಯನ್ನು ಅತ್ಯಂತ ಗೌರವ, ಭಕ್ತಿಯಿಂದ ನಾವು ಆಯೋಜಿಸುತ್ತಿರುವುದಾಗಿ ತಿಳಿಸಿದರು.

ಈ‌ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಪಾಲಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಉಮಾ ಮುಕುಂದ, ಉಮೇಶಗೌಡ ಕೌಜಗೇರಿ, ಮಲ್ಲಿಕಾರ್ಜುನ ಗುಂಡೂರ, ಬೀರಪ್ಪ ಖಂಡೇಕರ, ಮೀನಾಕ್ಷಿ ವಂಟಮೋರಿ ಸೇರಿದಂತೆ ಹಲವರಿದ್ದರು.