ಸ್ವಾಮಿ ವಿವೇಕಾನಂದ ಜಯಂತಿ: ರಾಮಕೃಷ್ಣ ಮಿಷನ್‌ನಿಂದ ಶೋಭಾಯಾತ್ರೆ

| Published : Jan 13 2024, 01:30 AM IST

ಸ್ವಾಮಿ ವಿವೇಕಾನಂದ ಜಯಂತಿ: ರಾಮಕೃಷ್ಣ ಮಿಷನ್‌ನಿಂದ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಜಯದೇವ ಸರ್ಕಲ್‌ನಿಂದ ಪ್ರಾರಂಭವಾದ ಶೋಭಾಯಾತ್ರೆ ವಿನೋಭನಗರದ ರಾಮಕೃಷ್ಣ ಮಿಷನ್‌ನಲ್ಲಿ ಮುಕ್ತಾಯವಾಯಿತು. ನಂತರ ರಾಮಕೃಷ್ಣ ಮಿಷನ್‌ನಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ರಸಪ್ರಶ್ನೆ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಾವಣಗೆರೆ: ನಗರದ ರಾಮಕೃಷ್ಣ ಮಿಷನ್‌ನಿಂದ ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಒಂದು ಶೋಭಾಯಾತ್ರೆ ಹಮ್ಮಿಕೊಂಡಿತ್ತು.

ಜಯದೇವ ಸರ್ಕಲ್‌ನಿಂದ ಪ್ರಾರಂಭವಾದ ಶೋಭಾಯಾತ್ರೆ ವಿನೋಭನಗರದ ರಾಮಕೃಷ್ಣ ಮಿಷನ್‌ನಲ್ಲಿ ಮುಕ್ತಾಯವಾಯಿತು. ನಂತರ ರಾಮಕೃಷ್ಣ ಮಿಷನ್‌ನಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ರಸಪ್ರಶ್ನೆ ವಿಜೇತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮೃತ ಪಿ.ಯು. ಕಾಲೇಜ್, ಎರಡನೇ ಸ್ಥಾನ ಪಡೆದ ಬ್ರಾಹ್ಮೀ ಅಕಾಡೆಮಿ, ಮೂರನೇ ಸ್ಥಾನ ಪಡೆದ ಸಿದ್ಧಗಂಗಾ ಪಿ.ಯು. ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿಗಳ ಪಡೆದರು. ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್‌ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಂತಿನಾಥ, ಶ್ರೀನಿವಾಸ ದಾಸಕರಿಯಪ್ಪ ಸೇರಿ ವಿದ್ಯಾರ್ಥಿಗಳು ಅನೇಕರಿದ್ದರು.

.......

ಕ್ಯಾಪ್ಷನಃ12ಕೆಡಿವಿಜಿ37ಃ