ಸಾರಾಂಶ
ನವಲಗುಂದ ಪಟ್ಟಣದ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಎನ್.ಎಸ್.ಎಸ್. ಘಟಕದಿಂದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನವಲಗುಂದ
ಸ್ವಾಮಿ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಬಹಳ ನಂಬಿಕೆ. ಹೀಗಾಗಿ, ಅವರು ''''ಕಬ್ಬಿಣದಂಥ ಮಾಂಸಖಂಡ, ಉಕ್ಕಿನಂಥ ನರಮಂಡಲ, ವಿದ್ಯುತ್ ನಂತಹ ಇಚ್ಛಾಶಕ್ತಿ ಇರುವ ನೂರಾರು ಯುವಕರನ್ನು ನನ್ನೊಂದಿಗೆ ಕಳಿಸಿ ನಾನು ನವಭಾರತ ನಿರ್ಮಾಣ ಮಾಡುತ್ತೇನೆ'''' ಎಂದು ಕರೆ ಕೊಟ್ಟಿದ್ದರು ಎಂದು ಎನ್.ಎಸ್.ಎಸ್. ಅಧಿಕಾರಿ ಡಾ. ಮಾರುತಿ ಹಾರೋಗೇರಿ ಹೇಳಿದರು.ಪಟ್ಟಣದ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಎನ್.ಎಸ್.ಎಸ್. ಘಟಕದಿಂದ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವೇಕಾನಂದರ ಮಾತು ಮಾಣಿಕ್ಯ, ಸಂದೇಶ ಅಮೃವಾಣಿ. ಅವುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ. ಅವರು ನಮ್ಮನ್ನು ಅಗಲಿ ಇಂದಿಗೆ ೧೨೨ ವರ್ಷವಾಯಿತು. ಶಿಕ್ಯಾಗೊ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಇಂದಿಗೆ ೧೩೧ ವರ್ಷ ಕಳೆದವು. ಆದರೂ ಅವರ ಬಗ್ಗೆ ಇಂದಿಗೂ ಚಿಂತನ-ಮಂಥನ ನಡೆಯುತ್ತಿವೆ ಎಂದರೆ ಅವರೊಬ್ಬ ದೈವ ಮಾನವನೇ ಸರಿ ಎಂದರು.ನಂತರ ಐಕ್ಯೂಎಸಿ ಸಂಯೋಜಕಿ ಡಾ. ಶೀಲಾ ತುಬಚಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಎಸ್.ವಿ ಬಡಿಗೇರ, ಡಾ. ಪಿ.ಜಿ. ಕೊಪ್ಪದ, ಡಾ. ಆರ್.ಪಿ. ಚವ್ಹಾಣ, ಡಾ. ಬಿ.ಕೆ. ಬಂಕಾಪುರ, ಡಾ. ಜಿ.ಎಸ್. ಚಿಣಗಿ, ಉಪನ್ಯಾಸಕರಾದ ಸ್ವಾತಿ ಕಟ್ಟಿ, ವಿಜಯಲಕ್ಷ್ಮೀ ಸಾವಂತ ಮತ್ತು ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.