ಸರ್ಕಾರ 5 ವರ್ಷ ಪೂರೈಸಲಿದೆ ಕೋಡಿಮಠದ ಸ್ವಾಮೀಜಿ

| Published : Jun 20 2024, 01:11 AM IST / Updated: Jun 20 2024, 12:47 PM IST

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರದ ಭವಿಷ್ಯವನ್ನು ಕೋಡಿಮಠದ ಶ್ರೀ ಶ್ರಾವಣ ಕಳೆದ ಮೇಲೆ ಹೇಳುತ್ತಾರಂತೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋಲ್ಲ ಅಂತ ಹೇಳಿದ್ದು ನಿಜವಾಗಿದೆ

 ಚಿಕ್ಕಬಳ್ಳಾಪುರ :  ಕ್ರೋಧನಾಮ ಸಂವತ್ಸರ ಕ್ರೋಧಗಳು ಹೆಚ್ಚಾಗಿ ನಡೆಯುತ್ತವೆ. ಕ್ರೋಧಿನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು. ಪಂಚಘಾತುಕಗಳನ್ನು ಗೆಲ್ಲೋದು ಕಷ್ಟ .ಭೂಕಂಪ, ಜಲಕಂಟಕ, ಆಗ್ನಿ, ವಾಯುವಿನಿಂದಲೂ ಆಪತ್ತಿದೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚು. ಅದರಿಂದ ಸುಖವೂ ಇದೆ ದುಃಖವೂ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.

ನಗರದ ವಾಪಸಂದ್ರದಲ್ಲಿರುವ ಟಿಪಿಎಸ್ ಮಾಜಿ ಅಧ್ಯಕ್ಷ ಚಿಕ್ಕಗೆರಗರೆಡ್ಡಿ ಮನೆಗೆ ಮಂಗಳವಾರ ಭೇಟಿ ನೀಡಿದ ಶ್ರೀಗಳು ಮಾಧ್ಯಮಗಳ ಜತೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸಲಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರದ ಭವಿಷ್ಯವನ್ನು ಶ್ರಾವಣ ಕಳೆದ ಮೇಲೆ ಹೇಳುತ್ತೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿಯಲ್ಲಿ ಹೇಳಿದ್ದೆ ಮೋದಿ ಸರ್ಕಾರ ಅಧಿಕಾರಕ್ಕೆ ಬರೋಲ್ಲ ಅಂತ. ಎಲ್ಲರೂ ಮುನ್ನೂರು ನಾನೂರು ಸೀಟು ಗೆಲ್ಲುತ್ತೆ ಅಂತ ಹೇಳಿದ್ರು. ನಾನೊಬ್ಬನೆ ಅಧಿಕಾರ ನಡೆಸುವಷ್ಟು ಸೀಟು ಬರೋಲ್ಲ ಎಂದು ಹೇಳಿದ್ದೆ. ಅದು ನಿಜವಾಗಿದೆ ಎಂದರು.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಬಾರಿ ಮಳೆ ಬೆಳೆ ಚೆನ್ನಾಗಿ ಆಗುತ್ತೆ ಶಾಶ್ವತ ನೀರಾವರಿಯೂ ಬರುತ್ತೆ ಆದ್ರೂ ಇನ್ನೂ ತುಂಬಾ ಸಮಯ ತಗೊಳ್ಳುತ್ತೆ ಎಂದು ಭವಿಷ್ಯ ನುಡಿದರು.

ಕೊಲೆ ಆರೋಪಿ ದರ್ಶನ್‌ ವಿಚಾರ

ಮನುಷ್ಯ ಸಹನೆ ನೆಮ್ಮದಿ ಕಳೆದುಕೊಂಡಾಗ ಕೋಪಕ್ಕೆ ತುತ್ತಾಗುತ್ತಾನೆ. ಬೆಳಿಗ್ಗೆ ನಾನು ಟಿವಿ ನೋಡ್ತಿದ್ದೆ ಸ್ವಾಮಿಗಳು ಸಿಟ್ಟು ಕಡಿಮೆ ಮಾಡು ಅಂತ ಹೇಳಿದ್ರು.ತಂದೆ-ತಾಯಿ ಮಾತು ಕೇಳಿ ಅಂತ ಹೇಳಿದ್ರು. ಅವರ ಮಾತು ಕೇಳಿ ನಾನು ದರ್ಶನ್ ಜೊತೆ ಜಗಳಕ್ಕೆ ಹೋಗಲಿಲ್ಲ ಅಂತ ಹೇಳ್ತಿದ್ದ. ನಟ ದರ್ಶನ್ ಜೊತೆ ಜಗಳ ಮಾಡಿಕೊಂಡಿದ್ದ ಉಮಾಪತಿ ಹಿಂಗಂತ ಹೇಳ್ತಿದ್ದ ಎಂದರು.

ಮಾನವನಿಗೆ ಕೋಪ, ಆಸೆ ಸಂತೋಷ ಎಲ್ಲವನ್ನೂ ಇಟ್ಟ ಹರಿಷ್ವಡ್ವರ್ಘಗಗಳನ್ನ ಗೆಲ್ಲಬೇಕು. ಇವತ್ತು ಗಲಾಟೆಗಳು ದೊಂಬಿಗಳು. ಟಿವಿ ನೋಡೋಕೆ ಆಗಲ್ಲ ಜನ ತಿದ್ದುಕೊಳ್ಳಬೇಕು. ಇವು ಇನ್ನೂ ಹೆಚ್ಚಾಗಲಿವೆ. ಮನುಷ್ಯ ಶಾಂತಿ ಶಿಸ್ತುಬದ್ದ ಜೀವನ ಮಾಡಬೇಕು. ಕೋಪದ ಕೈಗೆ ಬುದ್ದಿ ಕೊಟ್ಟಾಗ ಹೀಗಾಗುತ್ತೆ ಎಂದು ಕೋಡಿಮಠ ಶ್ರೀಗಳು ತಿಳಿಸಿದರು.ಸಿಕೆಬಿ-5 ಚಿಕ್ಕಬಳ್ಳಾಪುರ ನಗರದಲ್ಲಿ ಕೋಡಿಮಠ ಶ್ರೀಗಳು ಮಾಧ್ಯಮಗಳ ಜತೆ ಮಾತನಾಡಿದರು.