ಸಾರಾಂಶ
ಪಟ್ಟಣದ ವಿಶ್ವಕರ್ಮ ಬೀದಿ ಸೇರಿದಂತೆ ಚಿತ್ರಮಂದಿರ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣ ವೃತ್ತ ಹಾಗೂ ಹೊಸ ತಿರುಮಕೂಡಲು ರಸ್ತೆಯ ಮಾರ್ಗವಾಗಿ ತ್ರಿವೇಣಿ ಸಂಗಮ ತಲುಪಿತು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಕುಂಭಮೇಳದಲ್ಲಿ ಭಾಗವಹಿಸುವ ವಿವಿಧ ಮಠಗಳ ಸ್ವಾಮೀಜಿ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಯಿತು.ಅಲಂಕರಿಸಿದ್ದ ವಾಹನಗಳ ರಥದಲ್ಲಿ ಕುಳಿತಿದ್ದ ಮಠಾಧಿಪತಿಗಳ ಮೆರವಣಿಗೆ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭಗೊಂಡಿತು. ಪಟ್ಟಣದ ವಿಶ್ವಕರ್ಮ ಬೀದಿ ಸೇರಿದಂತೆ ಚಿತ್ರಮಂದಿರ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣ ವೃತ್ತ ಹಾಗೂ ಹೊಸ ತಿರುಮಕೂಡಲು ರಸ್ತೆಯ ಮಾರ್ಗವಾಗಿ ತ್ರಿವೇಣಿ ಸಂಗಮ ತಲುಪಿತು. ಮಂಗಳವಾದ್ಯ, ವೀರಗಾಸೆ, ವಚನಾ ತಂಡಗಳು, ಕೊಂಬು ಕಹಳೆ, ಕಳಶ ಒತ್ತ ಸುಮಂಗಲಿಯರು, ಕಂಸಾಳೆ ಪೂಜೆ ಕುಣಿತ, ಗರುಡಿ ಕುಣಿತ, ಕೋಲಾಟ, ವೀರ ಮಕ್ಕಳ ಕುಣಿತ, ಕೀಲು ಕುದುರೆ, ಪಟ್ಟ ಕುಣಿತ ತಮಟೆ, ಬ್ಯಾಂಡ್ ಸೆಟ್ ದೇವಾಳ ಮತ್ತು ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಕಳೆಯನ್ನು ತಂದವು. ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.