ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ‘ಸ್ವರ್ಣ ಧಾಮ’ ಹಿರಿಯ ನಾಗರಿಕರ ವಸತಿ ಬಡಾವಣೆಯ ಮುಖ್ಯದ್ವಾರ ಹಾಗೂ ಮಾದರಿ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ ಅಧ್ಯಕ್ಷ ಬಾಲಕೃಷ್ಣ ಶರ್ಮ ನೆರೋಳು ತಿಳಿಸಿದ್ದಾರೆ.

ಮೂಡುಬಿದಿರೆ: ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ‘ಸ್ವರ್ಣ ಧಾಮ’ ಹಿರಿಯ ನಾಗರಿಕರ ವಸತಿ ಬಡಾವಣೆಯ ಮುಖ್ಯದ್ವಾರ ಹಾಗೂ ಮಾದರಿ ಮನೆಯ ಶಂಕುಸ್ಥಾಪನಾ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ ಅಧ್ಯಕ್ಷ ಬಾಲಕೃಷ್ಣ ಶರ್ಮ ನೆರೋಳು ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಆಯರಬೆಟ್ಟು, ಬೈಲಬರಿ ರಸ್ತೆ, ಕೆಸರಗದ್ದೆ ಪ್ರದೇಶದಲ್ಲಿ ಈ ವಸತಿ ಬಡಾವಣೆ ರೂಪುಗೊಳ್ಳಲಿದ್ದು, ಹಿರಿಯ ನಾಗರಿಕರಿಗೆ ಅನುಕೂಲಕರವಾದ ವಸತಿ ವ್ಯವಸ್ಥೆ ಕಲ್ಪಿಸುವ ಉದ್ದೇಶವನ್ನು ಹೊಂದಿದೆ ಎಂದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ನೆರವೇರಿಸುವರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಕೆ. ಶೇಣವ ಹಾಗೂ ಸಹಕಾರಿ ರತ್ನ ಭಾಸ್ಕರ ಎನ್. ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ಯ ಗೌರವ ಸಲಹೆಗಾರರಾದ ನೆರೋಳು ಈಶ್ವರ ಭಟ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸ್ವರ್ಣ ಧಾಮ’ದ ಪ್ರಮುಖ ವಿಶೇಷತೆಗಳು: ಹಿರಿಯರು ಮತ್ತು ಪ್ರೀತಿಪಾತ್ರರಿಗೆ ಒತ್ತಡಮುಕ್ತ ಮತ್ತು ಪ್ರಶಾಂತ ಸಮುದಾಯ ಆಧಾರಿತ ಜೀವನಕ್ಕಾಗಿ ಅವರ ಬಜೆಟ್‌ಗೆ ಅನುಗುಣವಾಗಿ ವಿವಿಧ ಗಾತ್ರದ ಫ್ಲ್ಯಾಟ್‌ಗಳು ಮತ್ತು ಕಸ್ಟಮೈಸ್ಡ್ ಮನೆಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಆರೋಗ್ಯ ತಪಾಸಣೆ, ಹೈ ಸ್ಪೀಡ್ ಇಂಟರ್‌ನೆಟ್, ಎಲೆಕ್ಟ್ರಿಕ್ ಬಗ್ಗಿಗಳ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಸಹಾಯ, ಆರೋಗ್ಯಕರ ಆಹಾರ, ಮನರಂಜನಾ ಪ್ರದೇಶ, ವಾಕಿಂಗ್ ಟ್ರ್ಯಾಕ್, ಪಾರ್ಕ್ ಮತ್ತು ಭದ್ರತೆಯ ಸೌಲಭ್ಯಗಳಿವೆ. ನಗರ ಪ್ರವಾಸಗಳು, ಯೋಗ ಹಾಗೂ ಧ್ಯಾನ ಮಂದಿರಗಳ ವ್ಯವಸ್ಥೆ ಇದೆ. ಹೂಡಿಕೆ ಮತ್ತು ಮರುಖರೀದಿ: ಭವಿಷ್ಯಕ್ಕಾಗಿ ಸ್ಮಾರ್ಟ್ ಹೂಡಿಕೆಯ ರೀತಿಯಲ್ಲೂ ಇದನ್ನು ಬಳಸಿಕೊಳ್ಳುವ ಅವಕಾಶವಿದ್ದು, ಮರಳಿ ಖರೀದಿಸುವ ವಿಶೇಷ ಸೌಲಭ್ಯವೂ ಲಭ್ಯವಿದೆ.