ಸಾರಾಂಶ
ಸ್ವರ್ಣ ಗೌರಮ್ಮ ದೇವಿಯವರ ಭಕ್ತವೃಂದ ಹಾಗೂ ಗ್ರಾಮಸ್ಥರ ಅಪೇಕ್ಷೆಯಂತೆ ಸ್ವರ್ಣ ಗೌರಮ್ಮನವರ ನೂತನ ದೇವಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳಿಂದ ಶೀಗಳ ಸಾನಿಧ್ಯದಲ್ಲಿ ಹಾಗೂ ಗ್ರಾಮದ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಭೂಮಿಪೂಜೆ ಕಾರ್ಯವನ್ನು ಕೋಡಿಮಠದ ಶ್ರೀಗಳು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಇತಿಹಾಸ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕಣಕಟ್ಟಿ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮನವರ 165ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಹಾಗೂ ಶುಕ್ರವಾರ ಬೆಳಗ್ಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೂತನ ದೇವಾಲಯದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.ಸ್ವರ್ಣ ಗೌರಮ್ಮ ದೇವಿಯವರ ಭಕ್ತವೃಂದ ಹಾಗೂ ಗ್ರಾಮಸ್ಥರ ಅಪೇಕ್ಷೆಯಂತೆ ಸ್ವರ್ಣ ಗೌರಮ್ಮನವರ ನೂತನ ದೇವಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳಿಂದ ಶೀಗಳ ಸಾನಿಧ್ಯದಲ್ಲಿ ಹಾಗೂ ಗ್ರಾಮದ ಗುರು ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ಭೂಮಿಪೂಜೆ ಕಾರ್ಯವನ್ನು ಶ್ರೀಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತವೃಂದಕ್ಕೆ ಆಶೀರ್ವಚನ ನೀಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಈ ನಾಡಿನ ಶಕ್ತಿ ದೇವತೆಯಾಗಿರುವ ಅಮ್ಮನವರ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಈ ಬಾರಿ ಯಶಸ್ವಿಯಾಗಿ ಜರುಗಲಿದ್ದು ಭಕ್ತವೃಂದಾ ಅಮ್ಮನವರ ಕೃಪೆಗೆ ಪಾತ್ರರಾಗಿ ಸುಖ ಶಾಂತಿ ನೆಲೆಸಲೆಂದು ಆಶಿಸಿದರು.ಈ ಪೂಜಾ ಕಾರ್ಯಕ್ರಮದಲ್ಲಿ ತಿಪಟೂರು ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ಮೂಲಸ್ಥಾನ ಸ್ವರ್ಣ ಗೌರಮ್ಮನವರ ಸೇವಾ ಸಮಿತಿ ಅಧ್ಯಕ್ಷ ನಟರಾಜ್ ಗ್ರಾಮದ ಮುಖಂಡರಾದ ಎಂ ಸಿ ನಟರಾಜ್, ಗ್ರಾಮ ಪಂಚಾಯತಿ ಸದಸ್ಯ ಕೊಡ್ಲಿ ಬಸವರಾಜ್, ಎಂಜಿ ಜಯಪ್ಪ, ಎಸ್ ಮಲ್ಲಿಕಾರ್ಜುನಪ್ಪ ,ಮಾಡಳು ಶಿವಲಿಂಗಪ್ಪ, ಸೋಮಶೇಖರ್, ದಲಿತ ಮುಖಂಡ ಚಂದ್ರಪ್ಪ, ದಾಸಪ್ಪ ಬೊಮ್ಮಸಮುದ್ರ, ಮಲ್ಲಿಕಾರ್ಜುನ್ ಭಾಗವಹಿಸಿದ್ದರು.