ಗೋಶಾಲೆಯಲ್ಲಿ ನೃತ್ಯ ರೂಪದಲ್ಲಿ ಸ್ವಾತಿ ತಿರುನಾಳ್ ಜೀವನ ಚರಿತ್ರೆ

| Published : May 08 2025, 12:31 AM IST

ಗೋಶಾಲೆಯಲ್ಲಿ ನೃತ್ಯ ರೂಪದಲ್ಲಿ ಸ್ವಾತಿ ತಿರುನಾಳ್ ಜೀವನ ಚರಿತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಸರಗೋಡು ಪೆರಿಯದ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಮಂಗಳವಾರ ಮುಂಬೈನ ಐಶ್ವರ್ಯಾ ಹರೀಶ್ ಅವರು ಸ್ವಾತಿ ತಿರುನಾಳ್ ಅವರ ಜೀವನ ಚರಿತ್ರೆಯನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಸರಗೋಡು ಪೆರಿಯದ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಪೆರಿಯ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ವೈಶಾಖ ನಟನಂ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಮಂಗಳವಾರ ಮುಂಬೈನ ಐಶ್ವರ್ಯಾ ಹರೀಶ್ ಅವರು ಸ್ವಾತಿ ತಿರುನಾಳ್ ಅವರ ಜೀವನ ಚರಿತ್ರೆಯನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದರು.

ಐಶ್ವರ್ಯಾ ಹರೀಶ್ ಸ್ವತಃ ಈ ಹಾಡನ್ನು ಬರೆದು ನಿರ್ದೇಶಿಸಿದರೆ, ಅವರ ಪತಿ ಹರೀಶ್ ಮುಂಬೈ ಹಾಡನ್ನು ಹಾಡಿ ಸಂಗೀತ ಸಂಯೋಜಿಸಿದ್ದಾರೆ. ಅವರ ಮಗಳು ವರ್ಷಿಣಿ ಜತಿಯಲ್ಲಿ, ಪವನ್ ಮಾಧವ್ ಮೃದಂಗದಲ್ಲಿ ಮತ್ತು ಜಯರಾಮ್ ಬೆಂಗಳೂರು ಮೃದಂಗದಲ್ಲಿ ಸಹಕರಿಸಿದರು. ಅರ್ಜುನ್ ಶ್ಯಾಮಲಾ ಕಥೆ ನಿರೂಪಿಸಿದರು.

ರಾಷ್ಟ್ರೀಯ ನೃತ್ಯೋತ್ಸವದ ಏಳನೇ ದಿನದಂದು ಎರ್ನಾಕುಲಂನ ಅಭಿರಾಮಿ ನವೀನ್, ಅತಿರಾ ಶಂಕರ್, ಮಧುರ್ ಸಹೋದರಿಯರಾದ ಸ್ಪೂರ್ತಿ ಮತ್ತು ಪ್ರೀತಿ, ಬೆಂಗಳೂರಿನ ಮಮತಾ ಪೈ ಮತ್ತು ಶ್ರಾವ್ಯ, ಕಾಸರಗೋಡು ಜಿಲ್ಲೆಯ ಚೈತ್ರಾ ಮತ್ತು ಅವರ ತಂಡ, ಮಾಳವಿಕಾ, ಋತುನಂದನ, ಮತ್ತು ಶ್ರುತಿ ಸಂಗೀತ, ವಾಗೆಯ ನೃತ್ಯ ಗೋವಿಯಸ್ ವಿದ್ಯಾಲಯದ ವಿದ್ಯಾರ್ಥಿನಿಯರು, ಜಿ. ಅನಘಾ ಮಿಹಿರ ಸಹೋದರಿಯರಾದ ದೇವಿಕಾ ಸಜೀವನ್ ಮತ್ತು ರಾಧಿಕಾ ಕಲ್ಲೂರಾಯ ಅವರು ಭರತನಾಟ್ಯ ಪ್ರದರ್ಶಿಸಿದರೆ, ಕ್ಷೇತ್ರ ಕಲಾ ಅಕಾಡೆಮಿ ಮಡೈಕಾವು ಮೋಹಿನಿಯಾಟ್ಟಂ ಮತ್ತು ಎರ್ನಾಕುಲಂನ ಅಂಜನಾ ಆನಂದ್ ಅವರು ಗೋಶಾಲಾ ನಂದಿ ಮಂಟಪದಲ್ಲಿ ಕೂಚುಪುಡಿ ಪ್ರದರ್ಶಿಸಿದರು.

ಈ ಸಂದರ್ಭ ಪರಂಪರಾ ವಿದ್ಯಾಪೀಠದಿಂದ ಜಿಲ್ಲಾ ನೃತ್ಯ ಶಿಕ್ಷಕಿ ರೆಗ್ಗಿ ಜಾನ್ ಮಾರ್ಟಿನ್ ಅವರನ್ನು ಸನ್ಮಾನಿಸಲಾಯಿತು.