ತರೀಕೆರೆಮನೆ ಮೇಲ್ಚಾವಣಿಗೆ ಹಾಕಿದ್ದ ಶೀಟನ್ನು ತೆಗೆದು ಒಳಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಸಿದ ತರೀಕೆರೆ ಪೊಲೀಸರು ಆತನಿಂದ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ.

ತರೀಕೆರೆ ಪೊಲೀಸರಿಂದ 24 ಘಂಟೆಯೊಳಗೆ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶ

ಕನ್ನಡಪ್ರಭ ವಾರ್ತೆ, ತರೀಕೆರೆ

ಮನೆ ಮೇಲ್ಚಾವಣಿಗೆ ಹಾಕಿದ್ದ ಶೀಟನ್ನು ತೆಗೆದು ಒಳಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಸಿದ ತರೀಕೆರೆ ಪೊಲೀಸರು ಆತನಿಂದ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ.

ಕೋಡಿಕ್ಯಾಂಪ್ ನಿವಾಸಿ ಸಯ್ಯದ್ ಸಾಧಿಕ್ ಬಂಧಿತ ಆರೋಪಿ.

ಪಟ್ಟಣದ ಕೋಡಿಕ್ಯಾಂಪ್ ನ 9ನೇ ಕ್ರಾಸ್ ನಿವಾಸಿ ತವಕ್ಕಲ್ ಮುಸ್ತಾನ್ ಅವರ ಮನೆಗೆ ಶನಿವಾರ ಸಂಜೆ 4.30 - 8 ಗಂಟೆ ಸಮಯದಲ್ಲಿ ನುಗ್ಗಿದ್ದ ಸಯ್ಯದ್ ಸಾಧಿಕ್ ಮನೆಯಲ್ಲಿದ್ದ 73.5 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹ 8,90,000 ನಗದು ಕಳ್ಳತನ ಮಾಡಿದ್ದನು. ಮನೆಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತವಕ್ಕಲ್ ಮಸ್ತಾನ್ ನೀಡಿದ ದೂರಿನ ಮೆರೆಗೆ ದೂರು ದಾಖಲಿಸಿಕೊಂಡು ಪ್ರಕರಣ ಭೇಧಿಸಿದ್ದಾರೆ.

ಆರೋಪಿಯಿಂದ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ವಿಶೇಷ ಕಾರ್ಯಾಚರಣೆ ಪೋಲೀಸ್ ಅಧೀಕ್ಷಕರು ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯ ಕುಮಾರ್, ಡಿವೈಎಸ್.ಪಿ. ಪರಶುರಾಮಪ್ಪ ಮಾರ್ಗದರ್ಶನದಲ್ಲಿ ತರೀಕೆರೆ ಠಾಣೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ, ಪಿಎಸ್.ಐ ನಾಗೇಂದ್ರ ನಾಯ್ಕ್, ಮಂಜುನಾಥ್ ಮನ್ನಂಗಿ , ದೇವೇಂದ್ರ ರಾಥೋಡ್, ಎಎಸ್.ಐ ರವಿ, ಎಚ್.ಸಿ. ಪ್ರಕಾಶ್, ಸಿಬ್ಬಂದಿ ರುದ್ರೇಶ್, ರಿಯಾಜ್, ಧನಂಜಯಸ್ವಾಮಿ, ಮಧು, ಕಾಂತರಾಜು, ರಾಜೇಶ ಹಾಗೂ ಎ.ಎಚ್.ಸಿ. ಶ್ರೀನಿವಾಸ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಯಶಸ್ವಿ ಕಾರ್ಯಾಚರಣೆಗೆ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.-

23ಕೆಟಿಆರ್.ಕೆ. 1ಃ

ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನಿವಾಸಿ ತವಕ್ಕಲ್ ಮುಸ್ತಾನ್ ಎಂಬುವರ ಮನೆಯಲ್ಲಿ ಕಳುವಾಗಿದ್ದ 73.5 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹8.90 ಲಕ್ಷ ನಗದು ಪತ್ತೆ ಮಾಡಿದ ತರೀಕೆರೆ ಪೊಲೀಸರ ತಂಡ.