ಸಾರಾಂಶ
ಮಂಗಳೂರು: ಅನೇಕರಿಗೆ ಕೇವಲ ಈಜುವುದೇ ಕಷ್ಟ, ಅದರಲ್ಲೂ ಕೊಳಲು ನುಡಿಸುತ್ತಾ ಈಜುವುದೆಂದರೆ!?ಇದನ್ನು ಸಾಧಿಸಿ ತೋರಿಸಿದವರು ಮಂಗಳೂರಿನ ಯುವಕ ರೂಬನ್ ಜೇಸನ್ ಮಚಾದೊ. ಕೊಳಲು ನುಡಿಸುತ್ತಾ ಬ್ಯಾಕ್ ಸ್ಟ್ರೋಕ್ ಈಜುತ್ತಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಸೃಷ್ಟಿಸಿದ್ದಾರೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳ ಈ ಅಪರೂಪದ ದಾಖಲೆಗೆ ಬುಧವಾರ ಸಾಕ್ಷಿಯಾಯಿತು.
ಮಚಾದೊ ಅವರಿಗೆ 300 ಮೀ. ಈಜುತ್ತಾ ಕೊಳಲು ನುಡಿಸುವುದನ್ನು ದಾಖಲಿಸುವ ಉದ್ದೇಶವಿತ್ತು. ಈಜುಕೊಳದ ಸುತ್ತಳತೆ 150 ಮೀಟರ್ ಇದ್ದು, ಎರಡು ಸುತ್ತು ಈಜಿದರೆ ಸಾಕಿತ್ತು. ಆದರೆ ಬರೋಬ್ಬರಿ ಐದೂಕಾಲು ಸುತ್ತು ಕೊಳಲು ನುಡಿಸಿಕೊಂಡು ಈಜಿದ್ದಾರೆ. ಈ ಮೂಲಕ 700 ಮೀ.ಗೂ ಅಧಿಕ ದಾಖಲೆ ಸೃಷ್ಟಿಸಿದ್ದಾರೆ.ಇದೇ ಪ್ರಥಮ ಪ್ರಯತ್ನ: ಈ ಸಂದರ್ಭ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯನ್ ಹೆಡ್ ಡಾ.ಮನೀಷ್ ಬಿಷ್ಣೋಯ್ ಇದ್ದರು. ರೂಬನ್ ಜೇಸನ್ ಮಚಾದೊ ಅವರ ಸಾಧನೆ ವಿಶ್ವದ ಎಲ್ಲೂ ಇದುವರೆಗೆ ದಾಖಲಾಗಿಲ್ಲ. ಇದೇ ಪ್ರಥಮ ಬಾರಿಗೆ ಈಜುಕೊಳದಲ್ಲಿ ಕೊಳಲು ನುಡಿಸಿಕೊಂಡು ಬ್ಯಾಕ್ ಸ್ಟ್ರೋಕ್ ಈಜುವ ಮೂಲಕ ದಾಖಲೆ ಬರೆದಿದ್ದಾರೆ ಎಂದರು. ಮಾತ್ರವಲ್ಲದೆ, ಸಾಂಕೇತಿಕವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಹಾಗೂ ಪದಕವನ್ನು ಪ್ರದಾನಿಸಿದರು. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.ಸಂತ ಅಲೋಶಿಯಸ್ ಸ್ನಾಯತ್ತ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಮಾಜಿ ಪತ್ರಿಕೋದ್ಯಮ ಉಪನ್ಯಾಸಕ ರೂಬನ್ ಜೇಸನ್ ಮಚಾದೊ, ಸಂಗೀತಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಬಾಲಿವುಡ್, ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್‌ನ ಚಲನಚಿತ್ರೋದ್ಯಮಗಳಿಗೆ ಪ್ರದರ್ಶನ ನೀಡುವ ವೃತ್ತಿಪರ ಸಂಗೀತಗಾರರು. ಆನ್‌ಲೈನ್ ಮೂಲಕ ಅಂತಾರಾಷ್ಟ್ರೀಯ ಸಂಗೀತ ತರಗತಿಗಳನ್ನು ನಡೆಸುತ್ತಾರೆ. ಕೊಳಲು, ಸ್ಯಾಕೋಫೋನ್, ಗಿಟಾರ್, ಹಾರ್ಮೋನಿಕಾ, ಟ್ರಂಪೆಟ್ ಮತ್ತು ಇತರ ಹಲವಾರು ವಾದ್ಯಗಳಲ್ಲಿ ಪ್ರವೀಣರಾಗಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))