ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಸಣ್ಣ ಸಮುದಾಯವಾದ ನಮಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಿ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಿಕೊಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ನಾಗೇಂದ್ರ ಹೇಳಿದರು.ತಾಲೂಕಿನ ಟಿ. ದೊಡ್ಡಪುರ ಗ್ರಾಮದಲ್ಲಿ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಸಣ್ಣ ಸಮುದಾಯವಾದ ನಮಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಿ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.ಟಿ. ದೊಡ್ಡಪುರ ಸವಿತಾ ಸಮಾಜದ ಅಧ್ಯಕ್ಷ ಚಿಕ್ಕಣ್ಣ ಸ್ವಾಮಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಖಜಾಂಚಿ ನಾಗರಾಜು, ಟಿ. ದೊಡ್ಡಪುರ ಸವಿತಾ ಸಮಾಜದ ಅಧ್ಯಕ್ಷ ಚಿಕ್ಕಣ್ಣ ಸ್ವಾಮಿ, ಖಜಾಂಚಿ ಸಿದ್ದೇಶ್, ಕಾರ್ಯದರ್ಶಿ ಚೇತನ್, ಉಪಾಧ್ಯಕ್ಷ ನಂಜುಂಡ ಶೆಟ್ಟಿ, ಎಸ್. ಅನಿಲ್ ಕುಮಾರ್, ಮಂಜೇಶ್, ಎಸ್. ಸಿದ್ದೇಶ್, ಅಭಿಷೇಕ್, ನಾಗೇಂದ್ರಪ್ರಸಾದ್, ಸಿ.ಡಿ. ಸಿದ್ದಯ್ಯ, ನವೀನ್, ಮಲ್ಲೇಶ್, ಶಾರದಮ್ಮ, ನಂಜುಂಡಮ್ಮ, ಗ್ರಾಪಂ ಸದಸ್ಯ ದೇವರಾಜು, ಚಿಕ್ಕಣ್ಣ, ಮಾಜಿ ಅಧ್ಯಕ್ಷೆ ಚಿಕ್ಕತಾಯಮ್ಮ, ಪಾಪಣ್ಣ, ರಮೇಶ್, ಸಿದ್ದಣ್ಣ, ತಲಕಾಡು ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ನಾಗರಾಜು, ರವಿಕುಮಾರ್, ರೇವಣ್ಣ, ಲೋಕೇಶ್, ನಂಜುಂಡ, ಮಹದೇವಣ್ಣ, ರಾಜೇಗೌಡ, ಸಿದ್ದಪ್ಪಾಜಿ, ಮಹದೇವ ಶೆಟ್ಟಿ ಇದ್ದರು.