ಸಾರಾಂಶ
ಚುನಾವಣಾಧಿಕಾರಿ ಆಶೋಕ್ ಘೋಷಣೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು.ನೂತನ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷಗಾಧಿಗೆ ಇತರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ರಮೇಶ್ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆಶೋಕ್ ಘೋಷಿಸಿದರು.ನಂತರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ನೂತನ ಅಧ್ಯಕ್ಷ ಟಿ.ರಮೇಶ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದೊಂದಿಗೆ ತಾವು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ತಮಗೆಲ್ಲರಿಗೂ ಆಭಾರಿಯಾಗಿದ್ದೇನೆ.ಇತ್ತೀಚಿನ ದಿನಗಳಲ್ಲಿ ತಂಗಲಿ ಗ್ರಾಮ ಪಂಚಾಯಿತಿ ಕಡೂರು ಪಟ್ಟಣಕ್ಕೆ ಹೊಂದಿಕೊಂಡಿದ್ದು ಅನೇಕ ಹೊಸ ಬಡಾವಣೆಗಳು ಗ್ರಾಪಂ ವ್ಯಾಪ್ತಿಗೆ ಸೇರುತ್ತಿದ್ದು ಅವುಗಳಿಗೆ ಮೂಲ ಸೌಲಭ್ಯ ನೀಡಲು ಶ್ರಮಿಸುತ್ತೇನೆ. ಅಲ್ಲದೆ ಬೀದಿ ದೀಪ, ಕುಡಿಯುವ ನೀರು, ಚರಂಡಿ ಮತ್ತು ಸ್ವಚ್ಛತೆಗೆ ಆಧ್ಯತೆ ನೀಡುತ್ತೇನೆ ಎಂದರು. ಪಂಚಾಯ್ತಿ ಉಪಾಧ್ಯಕ್ಷೆ ವಿಜಯಾಬಾಯಿ, ಸದಸ್ಯರಾದ ರಘುರಾಮ್, ಜ್ಯೋತಿ ಎಸ್, ಪರಮೇಶ್ವರಪ್ಪ, ಬಿ.ಟಿ. ಗಂಗಾಧರನಾಯ್ಕ, ಅರತಿ, ಕಾವೇರಿ ಬಾಯಿ ಕೃಷ್ಣನಾಯ್ಕ, ಗಿರೀಶ್, ಸುಧಾ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಮುಖಂಡರಾದ ನಾರಾಯಣ, ಕೃಷ್ಣಾನಾಯ್ಕ,ಸೇವಾಪುರ ರಾಜು, ಪಿಡಿಓ ಸುನೀಲ್,ಕಾರ್ಯದರ್ಶಿ ಸುಶ್ಮಿತಾ ಹಾಗೂ ಗ್ರಾಮಸ್ಥರು ಇದ್ದರು.6ಕೆಕೆಡಿಯು2. ಕಡೂರು ತಾಲೂಕು ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾದರು.