ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ಮಮತಾ ಸ್ವಾಗತ

| Published : Mar 22 2025, 02:02 AM IST

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಬೇಲೂರು ತಾಲೂಕು ದಂಡಾಧಿಕಾರಿಗಳಾದ ಮಮತಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ನೀರನ್ನು ನೀಡುವ ಮೂಲಕ ಸ್ವಾಗತಿಸಿ ಶುಭ ಕೋರಿದರು. ಹಳೇಬೀಡು ಸರ್ಕಾರಿ ಕೆಪಿಎಸ್ ಶಾಲೆಯ ಆವರಣದಲ್ಲಿ ಮಾತನಾಡುತ್ತ, ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡಿದರೆ ಜೀವನದಲ್ಲಿ ಒಳ್ಳೆಯ ಹಂತಕ್ಕೆ ಬರುತ್ತೀರಾ. ವಿದ್ಯೆ ಹಿಂದೆ ಒಳ್ಳೆಯ ಸಂಸ್ಕೃತಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹಳೇಬೀಡು: ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಬೇಲೂರು ತಾಲೂಕು ದಂಡಾಧಿಕಾರಿಗಳಾದ ಮಮತಾ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ನೀರನ್ನು ನೀಡುವ ಮೂಲಕ ಸ್ವಾಗತಿಸಿ ಶುಭ ಕೋರಿದರು.

ಹಳೇಬೀಡು ಸರ್ಕಾರಿ ಕೆಪಿಎಸ್ ಶಾಲೆಯ ಆವರಣದಲ್ಲಿ ಮಾತನಾಡುತ್ತ, ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡಿದರೆ ಜೀವನದಲ್ಲಿ ಒಳ್ಳೆಯ ಹಂತಕ್ಕೆ ಬರುತ್ತೀರಾ. ವಿದ್ಯೆ ಹಿಂದೆ ಒಳ್ಳೆಯ ಸಂಸ್ಕೃತಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡುತ್ತಾ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೨೦೮೧ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಗಂಡು ಮಕ್ಕಳು, ೧೦೧೭ ಹೆಣ್ಣು ಮಕ್ಕಳು ೧೦೬೪ ಇದ್ದು, ಒಟ್ಟು ೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿ ೧೨ ಅಂಗವಿಕಲ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಮುಖ್ಯ ಅಧೀಕ್ಷಕರು ೮ ,ಪ್ರಶ್ನೆ ಪತ್ರಿಕೆ ಅಧೀಕ್ಷಕರು ೮, ಸ್ಥಾನಿಕ ಜಾಗೃತ ದಳ ೧೦, ಗೌಪ್ಯ ಮಾರ್ಗಅಧಿಕಾರಿಗಳು ೩, ಮೊಬೈಲ್ ಸ್ವಾಧೀನ ಅಧಿಕಾರಿಗಳು ೭ ,ಕೊಠಡಿ ಮೇಲ್ವಿಚಾಕರು, ಸಿಸಿ.ಕ್ಯಾಮರ ಕಂಟ್ರೋಲ್ ಎಲ್ಲಾ ಕೇಂದ್ರಗಳಲ್ಲಿ ೧೦೦, ಆರೋಗ್ಯ ಕಾರ್ಯಕರ್ತರು ೧೪, ಒಟ್ಟು ಸಿಬ್ಬಂದಿ ೩೩೦ ಕಾಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಕೆ.ಪಿ.ಎಸ್ ಉಪ ಪ್ರಾಂಶುಪಾಲ ಮುಳ್ಳಯ್ಯ ಮಾತನಾಡುತ್ತಾ ೪೨೬ ಮಕ್ಕಳಲ್ಲಿ ೩ ಹಳೆ ವಿದ್ಯಾರ್ಥಿಗಳು ಇದ್ದು ಒಟ್ಟು ೧೮ ಕೊಠಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಇದರ ಜವಾಬ್ದಾರಿ ಸಂಪೂರ್ಣ ವಿಶೇಷವಾಗಿ ಗಮನಹರಿಸಿದ್ದೇವೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಮಕ್ಕಳಿಗೆ ಶುಭ ಕೋರಿದರು. ಬೇಲೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್ ಹಾಗೂ ಶಿಕ್ಷಣ ಇಲಾಖೆ ಇಸಿಓ ಕುಮಾರ್ ಮತ್ತು ಗೋಪಾಲ್, ಉದಯಕುಮಾರ್ ಹಾಗೂ ಎಲ್ಲಾ ಮುಖ್ಯ ಶಿಕ್ಷಕರ ಹಾಜರಾಗಿದ್ದರು.

ಶಾಸಕರ ಶುಭ ಸಂದೇಶ:

"ಇಡೀ ವರ್ಷ ಶಾಲೆಯಲ್ಲಿ ಕಲಿತು ಪರೀಕ್ಷೆ ಬರೆಯಲು ಸಿದ್ಧರಾಗಿರುವ ನನ್ನ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳೇ ಇಂದು ತಮ್ಮ ಬದುಕಿನ ಅತ್ಯ ಅಮೂಲ್ಯವಾದ ದಿನ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ತಮ್ಮ ಪೋಷಕರ ಕನಸನ್ನು ನನೆಸು ಮಾಡುಬೇಕು ವಿದ್ಯಾರ್ಥಿಗಳೇ ಮುಂದಿನ ದಿನಗಳಲ್ಲಿ ಬೆಳೆಯಲು ಮುಖ್ಯ ಗುರಿಯನ್ನು ತಲುಪಿಸುವ ಗುರುಗಳು ಅಷ್ಟೇ ಮುಖ್ಯ ಎಂಬುದನ್ನು ಮರೆಯಬಾರದು. ನಿಮ್ಮ ಜೀವನದಲ್ಲಿ ಪರೀಕ್ಷೆಯನ್ನು ತಾಳ್ಮೆಯಿಂದ ಬರೆಯಿರಿ.ನಿಮ್ಮ ಜೀವನ ಸುಖಕರವಾಗಿರಲಿ " ಎಂದು ಬೇಲೂರು ಕ್ಷೇತ್ರ ಶಾಸಕ ಎಚ್.ಕೆ.ಸುರೇಶ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.