ಶ್ರೀ ರಾಘವೇಂದ್ರಸ್ವಾಮಿಗಳವರು ಈ ಧರೆಯಲ್ಲಿ ಜನಿಸಿ, ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ, ಹಾಗೂ ಸಕಲ ವಿದ್ಯೆಗಳಲ್ಲಿ ಪಾರಂಗತರಾಗಿ ಸಮಾಜದಲ್ಲಿ ಭಕ್ತಿ, ಧರ್ಮ, ಧಾರ್ಮಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ಅವತರಿಸಿದ್ದರು. ಇಂತಹ ಮಹನೀಯರ ಆದರ್ಶಗಳ ಬದುಕು ನಾವು ಅಳವಡಿಸಿಕೊಂಡು ನಡೆಯಬೇಕು. ಆಗ ಮಾತ್ರ ನಮ್ಮ ಹಿಂದಿನವರು ಹಾಕಿಕೊಟ್ಟ ಸನಾತನ ಧರ್ಮಗಳು ಉಳಿಯುತ್ತವೆ. ಶ್ರೀ ಉತ್ತರಾಧಿ ಮಠದ ಆವರಣದಲ್ಲಿ ಪ್ರಸಾದ ನಿಲಯದ ಕಾಮಗಾರಿ ನಡೆಯುತ್ತಿದ್ದು ಸಹಾಯ ಸಹಕಾರ ನೀಡುವುದಾಗಿ ತಹಸೀಲ್ದಾರ್ ಸೌಮ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ಮಧ್ಯಾಹ್ನ ಅರಕಲಗೂಡು ತಾಲೂಕು ತಹಸೀಲ್ದಾರ್‌ ಕೆ. ಸಿ. ಸೌಮ್ಯ ಅವರು ರಾಘವೇಂದ್ರಸ್ವಾಮಿ ಉತ್ತರಾಧಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹಾಗೂ ಮಹಾಮಂಗಳಾರತಿ ಪಡೆದರು.ನಂತರ ಮಾತನಾಡಿದ ಅವರು, ಶ್ರೀ ರಾಘವೇಂದ್ರಸ್ವಾಮಿಗಳವರು ಈ ಧರೆಯಲ್ಲಿ ಜನಿಸಿ, ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ, ಹಾಗೂ ಸಕಲ ವಿದ್ಯೆಗಳಲ್ಲಿ ಪಾರಂಗತರಾಗಿ ಸಮಾಜದಲ್ಲಿ ಭಕ್ತಿ, ಧರ್ಮ, ಧಾರ್ಮಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ಅವತರಿಸಿದ್ದರು. ಇಂತಹ ಮಹನೀಯರ ಆದರ್ಶಗಳ ಬದುಕು ನಾವು ಅಳವಡಿಸಿಕೊಂಡು ನಡೆಯಬೇಕು. ಆಗ ಮಾತ್ರ ನಮ್ಮ ಹಿಂದಿನವರು ಹಾಕಿಕೊಟ್ಟ ಸನಾತನ ಧರ್ಮಗಳು ಉಳಿಯುತ್ತವೆ. ಶ್ರೀ ಉತ್ತರಾಧಿ ಮಠದ ಆವರಣದಲ್ಲಿ ಪ್ರಸಾದ ನಿಲಯದ ಕಾಮಗಾರಿ ನಡೆಯುತ್ತಿದ್ದು ಸಹಾಯ ಸಹಕಾರ ನೀಡುವುದಾಗಿ ತಹಸೀಲ್ದಾರ್ ಸೌಮ್ಯ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಮಠ ವ್ಯವಸ್ಥಾಪಕರು ಕನಕಚಾರ್ಯರು, ಸಮಾಜ ಸೇವಕರಾದ ಪಾಂಡುಚೇರಿ ವಿಜಯಕುಮಾರ್‌, ನಾಗೇಶ್ ಮುಂತಾದವರು ಇದ್ದರು.‌