ಟೈಲರ್ಸ್‌ ಅಸೋಸಿಯೇಶನ್‌ ಕಿನ್ನಿಗೋಳಿ ವಲಯ ರಜತ ಮಹೋತ್ಸವ

| Published : Oct 06 2025, 01:01 AM IST

ಸಾರಾಂಶ

ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ನ ಕಿನ್ನಿಗೋಳಿ ವಲಯದ ರಜತ ಮಹೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಟೈಲರ್ಸ್ ಆಸೋಸಿಯೇಶನ್‌ ನ ಕಿನ್ನಿಗೋಳಿ ವಲಯ ಸಮಿತಿಯು ಕಳೆದ 25 ವರ್ಷಗಳಲ್ಲಿ ಉತ್ತಮ ಕಾರ್ಯ ಮಾಡಿದ್ದು ರಜತ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆಯೆಂದು ಕಿನ್ನಿಗೋಳಿ ವಲಯ ಸಮಿತಿಯ ಅಧ್ಯಕ್ಷ ಶೇಖರ ಪೂಜಾರಿ ಹೇಳಿದರು.

ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಿದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ನ ಕಿನ್ನಿಗೋಳಿ ವಲಯದ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಆನಂದ, ಬಿ.ವಸಂತ, ಪ್ರವೀಣ್ ಸಾಲ್ಯಾನ್, ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ಅಧ್ಯಕ್ಷ ಸುರೇಶ್ ಸಾಲ್ಯಾನ್, ಆಂತರಿಕ ಲೆಕ್ಕ ಪರಿಶೋಧಕರಾದ ರಘುನಾಥ ಪುತ್ತೂರು, ಕೆ.ಎಸ್.ಟಿ.ಎ ದ. ಕ. ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಲಕ್ಷಣ್ ಉಳ್ಳಾಲ್, ಮಾಜಿ ಅಧ್ಯಕ್ಷ ಸಂತೋಷ್‌ ಕುಮಾ‌ರ್ ಜೈನ್, ರಮೇಶ್ ಮಾಡೂರು, ಉದಯ ಕೋಡಿಕಲ್, ವಿದ್ಯಾ ಶೆಟ್ಟಿ, ಲಿಂಗಪ್ಪ ಉಳ್ಳಾಲ್, ಮಾಜಿ ಕೋಶಾಧಿಕಾರಿ ಮೋಹನ್ ಶೆಟ್ಟಿ, ಚಕ್ರೇಶ ಅಮೀನ್, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿಗಾ‌ರ್, ಅಣ್ಣಪ್ಪ, ಕೆ.ಎಸ್.ಟಿ.ಎ ಕಿನ್ನಿಗೋಳಿ ವಲಯ ಸಮಿತಿಯ ಗೌರವಾಧ್ಯಕ್ಷ ಶಂಕರ ಬಿ.ಕೋಟ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ಕಿನ್ನಿಗೋಳಿಯ ರಾಜಾಂಗಣದಿಂದ ಯುಗಪುರುಷ ವರೆಗೆ ಜಾಥಾ ನಡೆಯಿತು. ರಾಜರಾಮ್ ಸ್ವಾಗತಿಸಿದರು, ಮೋಹನ್ ಪ್ರಸ್ತಾವನೆಗೈದರು.