ಉಡುಪಿ: ಜಿಲ್ಲೆಯಲ್ಲಿ ಹೊರರಾಜ್ಯದ ವ್ಯಾಪಾರಿಗಳಿಂದ ಸ್ಥಳೀಯ ಹೊಲಿಗೆ ವೃತ್ತಿಯಲ್ಲಿ ತೊಡಗಿರುವ ಟೈಲರ್‌ಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಟೈಲರುಗಳು ಶನಿವಾರ ಪ್ರತಿಭಟನೆ ನಡೆಸಿದರು.

ಉಡುಪಿ ಜಿಲ್ಲೆಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ಹೊರರಾಜ್ಯದ ವ್ಯಾಪಾರಿಗಳು ತಮ್ಮೂರಿನ ಟೈಲರುಗಳನ್ನು ಕರೆದುಕೊಂಡು ಬಂದು ಅವರಿಂದ ಬಟ್ಟೆ ಹೊಲಿಸುತ್ತಿದ್ದಾರೆ. ಇದರಿಂದ ದಶಕಗಳಿಂದ ಈ ವೃತ್ತಿಯನ್ನೇ ನಂಬಿಕೊಂಡಿರುವ ಸ್ಥಳೀಯ ಟೈಲರುಗಳ ಬದುಕಿಗೆ ಹೊಡೆತ ಬಿದ್ದಿದೆ. ಆದ್ದರಿಂದ ಬಟ್ಟೆ ವ್ಯಾಪಾರಕ್ಕೆ ಬಂದಿರುವ ವ್ಯಾಪಾರಿಗಳು ಆ ಕೆಲಸವನ್ನು ಮಾಡಬೇಕು, ಹೊರತು ಅನಧಿಕೃತವಾಗಿ ತಾವೇ ಬಟ್ಟೆ ಹೊಲಿಯುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಕರವೇ ​ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿ ನೇತೃತ್ವದಲ್ಲಿ ನಗರದ ವಿವಿಧ ಬಟ್ಟೆ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕರವೇ ಮತ್ತು ಟೈಲರ್ ಪ್ರಮುಖರಾದ ಶಾಬುದ್ದೀನ್, ರಾಜು ಬಸ್ರೂರು, ಪುರುಷೋತ್ತಮ್ ಪೂಜಾರಿ ಕೊಡಪಾಡಿ, ಮಜೀದ್, ಅಜಾರುದ್ದೀನ್, ದಾಮೋದರ ಮೊಗವೀರ, ಅಶ್ವಿನಿ ನಾಯ್ಕ್, ಅನುಷಾ ಆಚಾರ್, ಸುನಂದಾ, ಶಶಿಕಲಾ, ಸಂತೋಷ್ ಶೆಟ್ಟಿ ಪಡುಮುಂಡು, ಕೆ.ಸಿ. ಸಂತೋಷ್, ಕಾರ್ಯದರ್ಶಿ ಕೃಷ್ಣ ಮೊಗವೀರ, ಶ್ರೀಧರ್ ಕೋಟೆ, ಶಿವಾನಂದ ಶೇರಿಗಾರ್, ಮಹೇಶ್ ಬಿ. ಎಚ್, ಕಿರಣ್ ಕೋಟೇಶ್ವರ, ರಾಜೇಶ್ ಪೂಜಾರಿ ತ್ರಾಸಿ, ಗೋಪಾಲ್ ಕಾವ್ರಾಡಿ, ಸುರೇಶ ಅಮಾಸೆಬೈಲು, ಮೊಬಿನ್ ಮತ್ತಿತರರು ಉಪಸ್ಥಿತರಿದ್ದರು.