ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ನಗರದ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಎಸ್.ಕುಮಾರ ಮಹೇಶ ಪಿಯು ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ ಮಾತನಾಡಿ, ವ್ಯಕ್ತಿಯು ಜೀವನದಲ್ಲಿ ಕೆಟ್ಟ ಕಾರ್ಯಗಳನ್ನು ಬಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಸತ್ಯ, ಧರ್ಮ, ಸದಾಚಾರದ ಮಾರ್ಗವನ್ನು ಅನುಸರಿಸಬೇಕು ಎಂದರು.ಪ್ರಾಚಾರ್ಯ ಸದಾಶಿವ ವಾಲಿಕಾರ ಮಾತನಾಡಿ, ಮೊದಲ ಮಹಾಕಾವ್ಯ ರಚಿಸಿದ ಕಾರಣದಿಂದ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಅವರು ಮಹರ್ಷಿ ವಾಲ್ಮೀಕಿಯಾಗಿ ಬದಲಾದರು. ಈ ಮಹಾಕಾವ್ಯ ಅವರ ಜೀವನ, ಸಾಮಾಜಿಕ, ಆಧ್ಯಾತ್ಮಿಕ ಮಹತ್ವ ವಿವರಿಸುತ್ತದೆ. ವಾಲ್ಮೀಕಿಯು ಮೊದಲ ಹೆಸರು ರತ್ನಾಕರ. ಒಮ್ಮೆ ನಾರದ ಋಷಿಯು ಉಪದೇಶದಿಂದ ಜ್ಞಾನೋದಯವಾಗಿ ಪರಮಾತ್ಮನ ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂತು. ರಾಮಾಯಣ ಮಹಾಕಾವ್ಯವು ವಾಲ್ಮೀಕಿಯ ಬೋಧನೆಗಳು ರಾಮನ ಮೌಲ್ಯಗಳನ್ನು ಉತ್ತೇಜಿಸುತ್ತವೆ. ಸತ್ಯ, ಕರ್ತವ್ಯ ಮತ್ತು ಕರುಣೆಯನ್ನು ಒತ್ತಿ ಹೇಳುತ್ತದೆ. ಸುಮಾರು 24,000 ಶ್ಲೋಕಗಳಿವೆ 7 ಕಾಂಡಗಳಿವೆ ಎಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ, ಮುಖ್ಯೋಪಾಧ್ಯಾಯ ಪ್ರಶಾಂತ ಹಿರೇಮಠ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.