ವಿಜಯ್ ಶಾ ವಿರುದ್ಧ ಕ್ರಮಕೈಗೊಳ್ಳಿ

| Published : May 18 2025, 01:33 AM IST

ಸಾರಾಂಶ

ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ಸೇನಾಧಿಕಾರಿ ಕರ್ನಲ್ ಖುರೇಷಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಾರ್ವಜನಿಕ ಭಾಷಣದಲ್ಲಿ ಶಾ ಅವರು ಕರ್ನಲ್ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಲೇಬಲ್ ಮಾಡಿದ್ದಾರೆ.

ಕೊಪ್ಪಳ:

ಆಪರೇಷನ್ ಸಿಂದೂರ ಬಗ್ಗೆ ಮಾಹಿತಿ ನೀಡುವ ನೇತೃತ್ವ ವಹಿಸಿದ್ದ ಕರ್ನಲ್ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದಿರುವ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಹೇಳಿಕೆ ವಿರೋಧಿಸಿ ಕೊಪ್ಪಳ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ತೀವ್ರ ಆಕ್ರಮಣಕಾರಿ, ಬೇಜವಾಬ್ದಾರಿ ಮತ್ತು ಕೋಮು ಆರೋಪದ ಟೀಕೆ ಮಾಡಿದ್ದಾರೆ. ಸೇನಾಧಿಕಾರಿ ಕರ್ನಲ್ ಖುರೇಷಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಾರ್ವಜನಿಕ ಭಾಷಣದಲ್ಲಿ ಶಾ ಅವರು ಕರ್ನಲ್ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಲೇಬಲ್ ಮಾಡಿದ್ದಾರೆ. ಇದು ಉನ್ನತ ಹುದ್ದೆಯಲ್ಲಿದ್ದ ಮಹಿಳೆಗೆ ಮಾಡಿರುವ ಅಪಮಾನವಾಗಿದ್ದು, ಇಂಥವರ ವಿರುದ್ಧ ಕ್ರಮವಹಿಸುವಂತೆ ಕೋರಲಾಗಿದೆ.

ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಲತಿ ನಾಯಕ್, ಅಲ್ಪಸಂಖ್ಯಾತರ ಘಟಕದ ಖಾಜಾಮೈನುದ್ದೀನ್ ಮುಲ್ಲಾ ಅವರು ಉಪಸ್ಥಿತರಿದ್ದರು.