ಕಾರಟಗಿ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಕಾರಟಗಿ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿ ಇಡಲು ಪುರಸಭೆ ಮತ್ತಷ್ಟು ಕಾರ್ಯ ಪ್ರವೃತ್ತವಾಗಬೇಕಾಗಿದ್ದು, ಆಡಳಿತ ಮಂಡಳಿಯ ಇಚ್ಛಾಶಕ್ತಿ ಮತ್ತಷ್ಟು ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಪುರಸಭೆ ಆವರಣದಲ್ಲಿ ಭಾನುವಾರ ೨.೦ ಯೋಜನೆಯಡಿ ಎರಡು ಆಟೋ ಟಿಪ್ಪರ್, ಎಸ್.ಎಫ್.ಸಿ. ಅನುದಾನದಲ್ಲಿ ಖರೀದಿಸಿದ ಒಂದು ಟ್ರ್ಯಾಕ್ಟರ್ ಗೆ ಚಾಲನೆ ನೀಡಿ ಮಾತನಾಡಿದರು.ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹಗೊಳ್ಳುವ ತ್ಯಾಜ್ಯ ಸಂಗ್ರಹಣೆಗೆ ಘನತ್ಯಾಜ್ಯ ಘಟಕ ನಿರ್ಮಾಣ ಹಂತದಲ್ಲಿದೆ. ಘಟಕಕ್ಕೆ ತ್ಯಾಜ್ಯ ಸಂಗ್ರಹಣೆಗಾಗಿ ಈ ವಾಹನ ಪುರಸಭೆ ಆಡಳಿತ ವಿವಿಧ ಯೋಜನೆಯಡಿ ಸುಮಾರ ೩೦ ಲಕ್ಷಗಳ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ.
ಪುರಸಭೆ ನೀಡಿದ ಕಸದ ಬುಟ್ಟಿಗಳಲ್ಲಿ ಕಸ ಸಂಗ್ರಹಿಸುವದರಿಂದ ಅನುಕೂಲವಾಗುತ್ತದೆ. ಕಸವನ್ನು ಮನೆ ಹತ್ತಿರದ ಖಾಲಿ ಸ್ಥಳಗಳಲ್ಲಿ ಹಾಕಬೇಡಿ.ಎಲ್ಲರೂ ಸೇರಿ ಪಟ್ಟಣದ ಸೌಂದರ್ಯಕರಣ ಕಾಪಾಡಬೇಕು. ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪುರಸಭೆಯೊಂದಿಗೆ ಸಾರ್ವಜನಿಕರ ಸಹಕಾರವೂ ಅತೀ ಮುಖ್ಯ. ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ ಕಸ ವಿಲೇವಾರಿ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಬೀದಿ ದೀಪ, ಕಾಂಕ್ರೀಟ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹೨.ಕೋಟಿ. ೭೨ ಲಕ್ಷ ೫೩ ಸಾವಿರ ಪುರಸಭೆ ಆಡಳಿತ ಮೀಸಲಿಟ್ಟಿದೆ. ನಾಳೆ ಮೆ ೧೮ರಂದು ಉ ಕೆ.ಕೆ.ಆರ್‌ಡಿಬಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಕಾರಟಗಿ ಪಟ್ಟಣಕ್ಕಾಗಿ ವಿಶೇಷ ಅನುದಾನ ತರಲು ಎಲ್ಲ ರೂಪುರೇಷ ಸಿದ್ಧಪಡಿಸಲಾಗಿದೆ. ಈ ಕುರಿತು ಭೂಮಿ ಪೂಜೆ ಸಮಯದಲ್ಲಿ ಎಲ್ಲ ಕಾಮಗಾರಿಗಳ ಕುರಿತು ಸಂಪೂರ್ಣ ಮಾಹಿತಿ ನೀಡುವೆ ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟಿಕಾರ, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರ, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಪುರಸಭೆ ಸದಸ್ಯ ಎಚ್.ಈಶಪ್ಪ, ಹಿರೇಬಸಪ್ಪ ಸಜ್ಜನ್, ಫಕೀರಪ್ಪ ಬಿಲ್ಗಾರ, ಸೋಮಶೇಖರ ಬೇರಗಿ, ವಿರೇಶ ಮುದುಗಲ್, ಬ್ಲಾಕ್ ಅಧ್ಯಕ್ಷ ಶರಣೆಗೌಡ ಮಾಪಾಟೀಲ್, ರಾಜಶೇಖರ ಆನೆಹೋಸುರ, ಮಹೇಶ ಕಂದಗಲ್, ಕೆ.ಸಿದ್ಧನಗೌಡ, ಶಿವು ಶೀಲವಂತರ, ಅಯ್ಯಪ್ಪ ಉಪ್ಪಾರ ಸೇರಿದಂತೆ ಪುರಸಭೆ ಅಧಿಕಾರಿ ರಾಘವೇಂದ್ರ, ಅಕ್ಷತಾ, ನಾಗರಾಜ ತಳವಾರ, ಅನಂತರಾವ್ ಜೂರಟಗಿ, ಹನಮೇಶ ಭಜಂತ್ರಿ, ಪವನ್ ಜೂರಟಗಿ, ಈರಪ್ಪ ಚೌಡ್ಕಿ ಸೇರಿದಂತೆ ಇನ್ನಿತರರು ಇದ್ದರು.