ಸಾರಾಂಶ
ಪ್ರತಿಯೊಬ್ಬ ಮನುಷ್ಯನಿಗೂ ಭಗವಂತ ಅವಕಾಶ ಕೊಟ್ಟಿದ್ದಾನೆ ಅದನ್ನು ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸ್ಪಟಿಕ ಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.
ಕನ್ನಪ್ರಭ ವಾರ್ತೆ ಶಿರಾ ಜಗತ್ತಿಗೆ ತಾಯಿ ಮೊದಲ ಗುರು, ನಂತರದ ಗುರು ತಂದೆ, ಆನಂತರದ ಸ್ಥಾನದಲ್ಲಿ ನಮಗೆ ಶಿಕ್ಷಣ ನೀಡಿದ ಮಾರ್ಗದರ್ಶನ ಮಾಡಿದವರು ಗುರುವಾಗುತ್ತಾರೆ. ಪ್ರತಿಯೊಬ್ಬ ಮನುಷ್ಯನಿಗೂ ಭಗವಂತ ಅವಕಾಶ ಕೊಟ್ಟಿದ್ದಾನೆ ಅದನ್ನು ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸ್ಪಟಿಕ ಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಭಕ್ತರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಯಾರು ನಮ್ಮನ್ನು ಕತ್ತಲಿಂದ ಬಿಡುಗಡೆಗೊಳಿಸಿ ಬೆಳಕೆಂಬ ಭಗವಂತನನ್ನು ತೋರಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸಿ ಯಶಸ್ವಿಯತ್ತ ಮುನ್ನಡೆಸುವವನೇ ಗುರು. ೮೪ ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದದ್ದು, ನಿಜವಾದ ಮನುಷ್ಯನ ಕರ್ತವ್ಯ ಭಗವಂತನನ್ನು ಎಲ್ಲೆಲ್ಲೂ ಕಾಣುವುದು, ತಾವು ಮಾಡುವ ಸೇವೆ ಪ್ರಾಮಾಣಿಕತೆ, ನಿಷ್ಕಲ್ಮಶ, ಶುದ್ಧ ಮನಸ್ಸಿನಿಂದ ಕೂಡಿದ್ದರೆ ಭಗವಂತ ನೀವು ಬೇಡಿದಕ್ಕಿಂತ ೧೦ ಪಟ್ಟು ಹೆಚ್ಚು ಕೊಡಲಿದ್ದಾನೆ. ಪ್ರತಿಯೊಬ್ಬರಿಗೂ ಒಬ್ಬ ದಿಗ್ದರ್ಶಕ ಬೇಕೆಂಬ ಕಾರಣದಿಂದ ಗುರುವನ್ನು ಸೃಷ್ಟಿ ಮಾಡಿದ್ದಾನೆ ಎಂದರು. ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಗುರುವಿರುತ್ತಾನೆ, ಗುರುವಿನ ಮಾರ್ಗದರ್ಶನ ಆಶೀರ್ವಾದ ಪ್ರತಿಯೊಬ್ಬರೂ ಪಡೆದರೆ ಜೀವನ ಸಾರ್ಥಕತೆ ಕಾಣಲಿದ್ದು ಯಶಸ್ವಿ ಬದುಕು ನಿಮ್ಮದಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥ ಹೋಮ ಹವನ ನೆರವೇರಿಸಿ, ಶ್ರೀ ಓಂಕಾರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತಾಲೂಕು ಪಂಚಾಯತಿ ಮಾಜಿ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ಶಿರಾ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಪುನೀತ್ ಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಶ್ರೀನಿವಾಸ್, ಮುಖಂಡ ಎ.ಆರ್. ಶ್ರೀನಿವಾಸಯ್ಯ, ತಮ್ಮಣ್ಣ, ನಿರಂಜನ್, ನರಸಿಂಹಯ್ಯ.ಎಸ್, ಮಧುಸೂದನ, ಕಾಂಗ್ರೆಸ್ ಮುಖಂಡ ಪಾರ್ಥ, ಮಂಜುನಾಥ ಗುಪ್ತ, ಉಮೇಶ್ ,ಮೆಡಿಕಲ್ ಮಂಜುನಾಥ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಗೋಪಿಕುಂಟೆ ಕುಮಾರ್ ಮಾಸ್ಟರ್, ಕಿತ್ತಗಳಿ ಮಂಜುನಾಥ್ ಸೇರಿದಂತೆ ಭಕ್ತರು ಹಾಜರಿದ್ದರು.