ಸಾಮಾಜಿಕ ಭದ್ರತೆ ಯೋಜನೆಯ ಸದುಪಯೋಗ ಪಡೆಯಿರಿ

| Published : Apr 28 2025, 11:47 PM IST

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಯೋಜನೆಗಳ ಅಡಿ ವಿಕಲಚೇನರಿಗೆ ಉದ್ಯೋಗ ಚೀಟಿ, ಜನನ-ಮರಣ ಪ್ರಮಾಣ ಪತ್ರ, ನಲ್ಲಿ ನೀರಿನ ಸಂಪರ್ಕದ ಪತ್ರಗಳು ಸೇರಿದಂತೆ ಇ ಖಾತಾ ವಿತರಿಸಲಾಯಿತು. ನಂತರ ಸರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.

ಕೊಪ್ಪಳ:

ಸಾಮಾಜಿಕ ಭದ್ರತೆ ಯೋಜನೆಗಳು ಜನ-ಮನ ತಲುಪಿದ್ದು, ಅವುಗಳ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದತ್ತು ಗ್ರಾಮ ಕಿನ್ನಾಳದಲ್ಲಿ ತಹಸೀಲ್ದಾರ್‌ ಕಾರ್ಯಾಲಯ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಜರುಗಿದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸೇವೆಗಳು ಜನರ ಮನೆ ಬಾಗಿಲಿಗೆ ಬಂದಿವೆ ಎಂದರು.

ಕಂದಾಯ ಇಲಾಖೆಯ ಸಂಧ್ಯಾ ಸುರಕ್ಷಾ, ವಿಧವಾ ಮಾಸಾಶನ ಸೇರಿದಂತೆ 371ಜೆ ಪ್ರಮಾಣ ಪತ್ರಗಳನ್ನು 50ಕ್ಕೂ ಅಧಿಕ ಅಭ್ಯರ್ಥಿಗಳಿಗೆ ವಿತರಿಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಯೋಜನೆಗಳ ಅಡಿ ವಿಕಲಚೇನರಿಗೆ ಉದ್ಯೋಗ ಚೀಟಿ, ಜನನ-ಮರಣ ಪ್ರಮಾಣ ಪತ್ರ, ನಲ್ಲಿ ನೀರಿನ ಸಂಪರ್ಕದ ಪತ್ರಗಳು ಸೇರಿದಂತೆ ಇ ಖಾತಾ ವಿತರಿಸಲಾಯಿತು. ನಂತರ ಸರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.

ತಹಸೀಲ್ದಾರ್‌ ವಿಠ್ಠಲ ಚೌಗಲೆ, ತಾಪಂ ಇಒ ದುಂಡಪ್ಪ ತುರಾದಿ, ಭೂ ದಾಖಲೆಗಳ ಇಲಾಖೆಯ ಎಡಿ ಬಸವಾಜ, ಕಂದಾಯ ನಿರೀಕ್ಷಕ ವಿಜಯಕುಮಾರ ಚಿತ್ರಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಡಂಬಳ, ಉಪಾಧ್ಯಕ್ಷ ದುರಗಪ್ಪ ಡಂಬರ, ಸದಸ್ಯರಾದ ಹನುಮೇಶ ಕೊವಿ, ಪ್ರಶಾಂತ ಕುಲಕರ್ಣಿ, ಮೈಲಾರಪ್ಪ ಉದ್ದಾರ, ಮಂಜುನಾಥ ಉದ್ದಾರ, ಸಣ್ಣೆಪ್ಪ, ಶಕುಂತಲಾ, ಮೇಘಾ ಹಿರೇಮಠ, ಕಮಲಮ್ಮ, ಪೂರ್ಣಿಮಾ, ಶಿಲ್ಪಾ, ಪಿಡಿಒ ಪರಮೇಶ್ವರಯ್ಯ ಇದ್ದರು.

ಉಪತಹಸೀಲ್ದಾರ್‌ ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿದರೆ, ನೀಲಮ್ಮ ನಿರೂಪಿಸಿದರು. ಗ್ರಾಪಂ ಸದಸ್ಯ ಹನುಮೇಶ ಕೋವಿ ವಂದಿಸಿದರು.