ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ವಾಲ್ಮೀಕಿ ಸಮುದಾಯದವರು ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದುಳಿಯುತ್ತಿದ್ದು, ಸಮಾಜದ ಪ್ರತಿಯೊಬ್ಬರು ಪರಿಶಿಷ್ಟ ವರ್ಗಗಳ ಯೋಜನೆಯಡಿ ದೊರಕುವ ಸೌಲಭ್ಯ ಪಡೆದು ಸಮಾಜದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಪಟ್ಟಣದಲ್ಲಿ ೨೦೨೧-೨೨ನೇ ಸಲಿನ ಲೆಕ್ಕ ಶೀರ್ಷಿಕೆಯಡಿ ₹ ೨ ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ಜನಾಂದವರಿಗೆ ಸಭೆ ಸಮಾರಂಭ ನಡೆಸಲು ಅನುಕೂಲವಾಗುವಂತೆ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಸರ್ಕಾರ ವಾಲ್ಮೀಕಿ ಸಮುದಾಯ ವಾಸಿಸುವ ಪ್ರತಿ ಗ್ರಾಮದಲ್ಲೂ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಆ ಮೂಲಕ ಸಮುದಾಯವು ಸಾಂಘಿಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ, ಸಮಾಜದ ಎಲ್ಲರಿಗೂ ಶುಭ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಗೋವಿಂದ ಕೌಲಗಿ ಮಾತನಾಡಿ, ಸರ್ಕಾರ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯದೆಡೆಗೆ ಹೆಜ್ಜೆ ಹಾಕಿದೆ. ಈ ಸಮುದಾಯಗಳ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು, ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.ಈ ವೇಳೆ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ರಫೀಕ್ ಭೈರಕದಾರ, ವಾಲ್ಮೀಕಿ ಸಮಾಜದ ಮುಖಂಡರಾದ ಮುದಕಪ್ಪ ನಾವಲಗಿ, ಯಮನಪ್ಪ ಗಸ್ತಿ, ಡಿ.ಆರ್. ಗಸ್ತಿ, ಸುಭಾಸ ಗಸ್ತಿ, ಲಕ್ಷ್ಮಣ ಮಾಲಗಿ, ಗೋವಿಂದ ಕೌಲಗಿ, ಯಲ್ಲಪ್ಪ ಗಸ್ತಿ, ಹೊಳಬಸು ದಂಡಿನ, ಬೀರಪ್ಪ ಮಾಯಣ್ಣವರ, ಮಾನಿಂಗಪ್ಪ ಹುಂಡೇಕಾರ, ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖಡ ಕಡಿವಾಲ, ಚನ್ನಬಸವ ಮಾಚನೂರ, ಕಿರಿಯ ಎಂಜಿನಿಯರ್ ಅಶೋಕ ಕ್ಯಾದಗಿರಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ವಾಲ್ಮೀಕಿ ಸಮಾಜ ಎಲ್ಲ ಹಿರಿಯರು ಇದ್ದರು.