ಜಾನುವಾರುಗಳ ಮೇವಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ

| Published : Feb 11 2024, 01:47 AM IST

ಸಾರಾಂಶ

ಬೇಸಿಗೆ ಸನಿಹವಾಗುತ್ತಿರುವುದರಿಂದ ಹಾಗೂ ನಾಡಿನಲ್ಲಿ ಬರಗಾಲವಿರುವದರಿಂದ ತಾಲೂಕಿನಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಅಧಿಕಾರಿಗಳು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಸೂಚನೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬೇಸಿಗೆ ಸನಿಹವಾಗುತ್ತಿರುವುದರಿಂದ ಹಾಗೂ ನಾಡಿನಲ್ಲಿ ಬರಗಾಲವಿರುವದರಿಂದ ತಾಲೂಕಿನಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಅಧಿಕಾರಿಗಳು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಸೂಚನೆ ನೀಡಿದ್ದಾರೆ.ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ಈ ಸಾಲಿನ ಬರ ಪೀಡಿತ ತಾಲೂಕು ಮಟ್ಟದ ಟಾಸ್ಕ್‌ ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಲ್ಲಿ ೧೧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಗ್ರಾಮಗಳಲ್ಲಿ ಕೂಡಲೇ ಬೊರ್‌ ವೆಲ್ ಕೊರೆಯಿಸಿ ನೀರಿನ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯಗೆ ಸೂಚಿಸಿದರು. ಬೇಸಿಗೆ ಹಿನ್ನೆಲೆ ಅಂತರ್ಜಲ ಕುಸಿಯುತ್ತದೆ. ಬೋರ್‌ವೆಲ್‌ಗಳಲ್ಲೂ ನೀರು ಕಡಿಮೆಯಾಗುವ ಕಾರಣ ಜಾನುವಾರುಗಳಿಗೆ ಮೇವಿನ ಹಾಹಾಕಾರ ಬರುವ ಹೊರ ರಾಜ್ಯಗಳಿಗೆ ಮೇವು ಹೋಗದಂತೆ ತಡೆ ಹಾಕಲಾಗಿದ್ದು ಜಾನುವಾರುಗಳಿಗೆ ಮೇವು ಸಿಗುವಂತೆ ನೋಡಿಕೊಳ್ಳಲು ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ಸಜ್ಜಾಗಬೇಕು ಎಂದರು. ಪಟ್ಟಣದಲ್ಲೂ ಕುಡಿವ ನೀರಿನ ಸಮಸ್ಯೆಯಿದೆ ಎಂದು ಶಾಸಕರ ಗಮನಕ್ಕೆ ಪುರಸಭೆ ಅಧಿಕಾರಿಗಳು ತಂದಾಗ ನೀರಿನ ಸಮಸ್ಯೆಯಾಗದಂತೆ ಮುಂದಾಗಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ತಾಕೀತು ಮಾಡಿದರು. ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಸೇರಿದಂತೆ ತಾಲೂಕು ಮಟ್ಟದ ಕೆಲ ಇಲಾಖೆಯ ಅಧಿಕಾರಿಗಳಿದ್ದರು.