ಶುದ್ಧ ನೀರು ಹಾಳಾಗದಂತೆ ನೋಡಿಕೊಳ್ಳಿ

| Published : Feb 22 2024, 01:47 AM IST

ಸಾರಾಂಶ

ಶುದ್ಧ ಕುಡಿಯುವ ನೀರನ್ನು ಪೋಲು ಮಾಡದೇ ಸದ್ಬಳಕೆ ಮಾಡಿಕೊಳ್ಳಿ ಎಂದು ಬಾಗಲಕೋಟೆ ಶಾಸಕ ಹೆಚ್.ವೈ.ಮೇಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಶುದ್ಧ ಕುಡಿಯುವ ನೀರನ್ನು ಪೋಲು ಮಾಡದೇ ಸದ್ಬಳಕೆ ಮಾಡಿಕೊಳ್ಳಿ ಎಂದು ಬಾಗಲಕೋಟೆ ಶಾಸಕ ಹೆಚ್.ವೈ.ಮೇಟಿ ಹೇಳಿದರು.

ಅವರು ಪಟ್ಟಣದ ವಾರ್ಡ್‌ ನಂ.15ರ ಲಂಬಾಣಿ ತಾಂಡಾದಲ್ಲಿ, ತಾಂಡಾ ಅಭಿವೃದ್ಧ ನಿಗಮದಿಂದ 2019-20ನೇ ಸಾಲಿನ ₹11 ಲಕ್ಷಗಳ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬೇಸಿಗೆಯ ಪ್ರಾರಂಭದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಗೊಂಡಿದ್ದು, ನಾಗರಿಕರಿಗೆ ತೊಂದರೆಯಾಗದಂತೆ ಉತ್ತಮ ನಿರ್ವಹಣೆಯೊಂದಿಗೆ ನೀರು ಪೋಲಾಗದಂತೆ ಎಚ್ಚರವಹಿಸಬೇಕು. ಬಂಜಾರ ಸಮಾಜದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಕೆಎಂಎಫ್ ನಿರ್ದೇಶಕ ಸಂಗಣ್ಣ ಹಂಡಿ, ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ಚಳ್ಳಗಿಡದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವೆಂಕಟೇಶ್ವರ ಬಂಜಾರ ಸಮಾಜದ ಅಧ್ಯಕ್ಷ, ಪ.ಪಂ ಸದಸ್ಯ ತುಕಾರಾಮ ಲಮಾಣಿ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಷಿ, ತಾಪಂ ಮಾಜಿ ಅಧ್ಯಕ್ಷ ಸಯ್ಯದ ಪೀರಾಖಾದ್ರಿ, ಪ.ಪಂ ಸದಸ್ಯರಾದ ಬೇಬಿ ಚವ್ಹಾಣ, ರಮೇಶ ಮುರಾಳ, ಸುಜಾತ ತತ್ರಾಣಿ, ಸಂಜಯ ಐಹೊಳ್ಳಿ, ಪಿಕೆಪಿಎಸ್ ಅಧ್ಯಕ್ಷ ಪಾಪಣ್ಣ ಭದ್ರಶೆಟ್ಟಿ, ಉಪಾಧ್ಯಕ್ಷ ಮೈಲಾರೆಪ್ಪ ನರಿ, ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್.ಬಂಡಿವಡ್ಡರ, ಕಾಂಗ್ರೆಸ್ ಧುರೀಣ ಅಮರೇಶ ಮಡ್ಡಿಕಟ್ಟಿ ಹಾಗೂ ಬಂಜಾರ ಸಮಾಜದ ಗುರುಹಿರಿಯರು ಪಾಲ್ಗೊಂಡಿದ್ದರು.